ಉಳ್ಳಾಲ: ಕಣಂತೂರು ಬೆಳ್ಳೇರಿಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೊಣಾಜೆ ಪೊಲೀಸರು ತೀರ್ಮಾನಿಸಿದ್ದಾರೆ.
ಉಳ್ಳಾಲ ಮಹಿಳೆ ಅತ್ಯಾಚಾರ ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಲು ಸಿದ್ಧತೆ - Rape, murder case
ಉಳ್ಳಾಲದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಲು ಕೊಣಾಜೆ ಪೊಲೀಸರು ತೀರ್ಮಾನಿಸಿದ್ದಾರೆ.
ಉಳ್ಳಾಲ ಮಹಿಳೆ ಅತ್ಯಾಚಾರ ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಲು ಸಿದ್ದತೆ
ಮೂಲತ: ಸಕಲೇಶಪುರದವನಾದ ಆರೋಪಿ ಮಹಮ್ಮದ್ ಅಶ್ರಫ್ (28) ಬಂಧಿತ ವ್ಯಕ್ತಿ. ಚಿನ್ನ ಹಾಗೂ ಹಣ ದರೋಡೆ ನಡೆಸಲು ಒಂಟಿ ಮಹಿಳೆಯಿದ್ದ ಮನೆಗೆ ಕನ್ನ ಹಾಕಿದ್ದ ಈತ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಈ ನಡುವೆ ಪೊಲೀಸ್ ತನಿಖೆಯ ದಾರಿ ತಪ್ಪಿಸಲು ಆರೋಪಿ ನೆಹರು ಮೈದಾನದಲ್ಲಿ ಮಲಗುವ ಐವರು ಸೇರಿಕೊಂಡು ಕೃತ್ಯ ಎಸಗಿರುವುದಾಗಿ ಸುಳ್ಳು ಹೇಳಿದ್ದ. ಸೆ. 26 ರಂದು ಮಹಿಳೆಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.