ಕರ್ನಾಟಕ

karnataka

ETV Bharat / state

ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ: ಮೂವರು ಗೆಳೆಯರು ಪೊಲೀಸ್ ವಶಕ್ಕೆ - ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ

ಉಳ್ಳಾಲದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಘಟನೆ ನಿನ್ನೆ ನಡೆದಿತ್ತು. ಈ ಸಂಬಂಧ ಪೊಲೀಸರು ಯುವತಿಯ ಮೂವರು ಗೆಳೆಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೂರು ಗೆಳೆಯರು ಪೊಲೀಸ್ ವಶಕ್ಕೆ
police take her three friends to castudy

By

Published : Mar 11, 2021, 1:43 PM IST

Updated : Mar 11, 2021, 2:23 PM IST

ಉಳ್ಳಾಲ:ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಆಶ್ರಯ ಕಾಲೋನಿ ಎಂಬಲ್ಲಿ ಬುಧವಾರ ನಡೆದಿತ್ತು. ಕೊಲೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಯುವತಿಯ ಮೂವರು ಗೆಳೆಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್

ಆಶ್ರಯ ಕಾಲನಿ ನಿವಾಸಿ ಚಿತ್ತಪ್ರಸಾದ್ ಮತ್ತು ಕವಿತಾ ದಂಪತಿ ಪುತ್ರಿ ಪ್ರೇಕ್ಷಾ(17) ಮೃತ ಯುವತಿ. ಈಕೆಯ ತಾಯಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಗ್ಯಾಸ್​​​ಲೈನ್ ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದ್ದು, ಮಧ್ಯಾಹ್ನ ತಾಯಿ ಅಂಗನವಾಡಿಯಿಂದ ಮನೆಗೆ ಊಟಕ್ಕೆ ಎಂದು ಬಂದು ನೋಡಿದಾಗ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಮೃತದೇಹ ಪತ್ತೆಯಾಗಿದೆ.

ಬೆಂಗಳೂರಿಗೆ ತೆರಳುವವರಿದ್ದರು:

ಕೊಲ್ಯ ನಿವಾಸಿ ವ್ಯಕ್ತಿಯೊಬ್ಬರು ಮಾಡೆಲಿಂಗ್ ಶೂಟ್​​​ಗಾಗಿ ಪ್ರೇಕ್ಷಾಳನ್ನು ಇಂದು ಬೆಂಗಳೂರಿಗೆ ಕೊಂಡೊಯ್ಯುವವರಿದ್ದರು. ಮಧ್ಯಾಹ್ನ 2 ಗಂಟೆಗೆ ಹೊರಡಲು ಎಲ್ಲ ತಯಾರಿ ಮಾಡಲಾಗಿತ್ತು. ಆದರೆ, ಈ ವಿಚಾರವಾಗಿ ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಬೇಸರಗೊಂಡಿದ್ದ ಪ್ರೇಕ್ಷಾ ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ , ಕಾಲೇಜಿಗೆ ತೆರಳದೇ ಮನೆಯಲ್ಲೇ ಉಳಿದಿದ್ದಳು. ಮಾಡೆಲಿಂಗ್​ ಹವ್ಯಾಸ ಹೊಂದಿದ್ದ ಪ್ರೇಕ್ಷಾ, ಬೆಂಗಳೂರಿನಲ್ಲಿ ಧಾರವಾಹಿಯೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿರುವ ಕುರಿತು ಗೆಳತಿಯರಲ್ಲಿ ತಿಳಿಸಿದ್ದರು. ಅಲ್ಲದೆ ಇತ್ತೀಚೆಗೆ ಮಂಗಳೂರಿನ ಸಾಯಿ ಪ್ಯಾಲೇಸ್ ಹೋಟೆಲ್​​ನಲ್ಲಿ ಜರಗಿದ್ದ ಟೀನ್ ತುಳುನಾಡ್-2020ರಲ್ಲಿ ಟಾಪ್-5 ಫೈನಲಿಸ್ಟ್ ಆಗಿದ್ದರು.

ಮೂವರು ವಶಕ್ಕೆ:

ಘಟನೆ ಸಂಬಂಧ ಮುಂಡೋಳಿ ನಿವಾಸಿ ಯತೀನ್ ರಾಜ್, ಆಶ್ರಯ ಕಾಲೊನಿ ನಿವಾಸಿ ಸೌರಭ್ ಮತ್ತು ಸುಹಾನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯತೀನ್ ರಾಜ್ ಪ್ರೇಕ್ಷಾಳ ಗೆಳೆಯನಾಗಿದ್ದನು. ಅನಾರೋಗ್ಯದ ಸಂದರ್ಭ ಆಸ್ಪತ್ರೆಗೆ ಯತೀನ್ ರಾಜ್ ಕರೆದೊಯ್ಯುತ್ತಿದ್ದನು. ಯುವತಿ ಮೃತದೇಹ ಪತ್ತೆಯಾಗುವ ಕೆಲ ನಿಮಿಷಗಳ ಮುನ್ನ ಮೂವರು ಆಕೆಯ ಮನೆ ಎದುರುಗಡೆ ಸುತ್ತಾಡುವುದನ್ನು ಸ್ಥಳೀಯರು ಕಂಡಿದ್ದರು. ಅವರಿಂದ ದೊರೆತ ಮಾಹಿತಿಯನ್ವಯ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಮಿಷನರ್ ಭೇಟಿ:

ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ, ಅರ್ಧ ಗಂಟೆಗೂ ಅಧಿಕ ಕಾಲ ಪ್ರೇಕ್ಷಾಳ ತಾಯಿ ಜೊತೆಗೆ ಮಾತನಾಡಿದ್ದೇನೆ. ಮೇಲ್ನೋಟಕ್ಕೆ ಪ್ರಕರಣ ಆತ್ಮಹತ್ಯೆ ಎಂಬುದು ಕಂಡು ಬಂದಿದೆ. ವಾರದಿಂದ ಅಸೌಖ್ಯದಿಂದ ಇದ್ದ ಪ್ರೇಕ್ಷಾ, ಇಂದು ಬೆಂಗಳೂರಿಗೆ ತೆರಳುವವಳಿದ್ದಳು. ಇದನ್ನು ತಾಯಿ ಆಕ್ಷೇಪಿಸಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದರು.

ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಫಾರೆನ್ಸಿಕ್ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಯುವತಿ ಮೃತದೇಹ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಓದಿ: ಉಳ್ಳಾಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

ಪ್ರೇಕ್ಷಾಳ ತಾಯಿ ಮನೆಗೆ ಬರುವ ಮುನ್ನ, ಪೊಲೀಸ್ ವಶದಲ್ಲಿರುವ ಮೂವರ ಪೈಕಿ ಓರ್ವನ ತಾಯಿ ಬಂದು ಮನೆಯ ಬಾಗಿಲು ಬಡಿದಿರುವುದಾಗಿ ಪ್ರೇಕ್ಷಾಳ ಸಹೋದರಿ ತಿಳಿಸಿದ್ದಾರೆ. ನೆರೆಮನೆಯವರೆ ಆದರೂ ಇಷ್ಟರವರೆಗೆ ಮನೆಗೆ ಬಂದವರಲ್ಲ. ಅವರ ಜೊತೆಗೆ ಸಂಬಂಧವೂ ಸರಿಯಿರಲಿಲ್ಲ. ಆದರೆ, ಮನೆಯ ಬಾಗಿಲು ಬಡಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯತೀನ್ ರಾಜ್ ಜೊತೆ ಆತ್ಮಹತ್ಯೆ ನಡೆಸುವ ವಿಚಾರವನ್ನು ತಿಳಿಸಿದ್ದು, ಆತ ಸ್ನೇಹಿತ ಸೌರಭ್​​ನ ಬಳಿ ತಿಳಿಸಿದಂತೆ ಆತನ ತಾಯಿ ಬಾಗಿಲು ಬಡಿದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Mar 11, 2021, 2:23 PM IST

ABOUT THE AUTHOR

...view details