ಕರ್ನಾಟಕ

karnataka

ETV Bharat / state

ಚುನಾವಣೆ ಮುಂದಿಟ್ಟುಕೊಂಡು ತೈಲ ಬೆಲೆ ಇಳಿಕೆ: ಯು.ಟಿ.ಖಾದರ್

ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದೆ ಎಂದು ಯು.ಟಿ.ಖಾದರ್ ಆರೋಪಿಸಿದರು.

U T Khadar
ವಿಧಾನಸಭೆಯ ವಿಪಕ್ಷ ಉಪನಾಯಕ ಯು ಟಿ ಖಾದರ್

By

Published : May 24, 2022, 7:33 AM IST

ಮಂಗಳೂರು(ದಕ್ಷಿಣ ಕನ್ನಡ): ಮುಂಬರುವ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆಯ ಕಾರಣಕ್ಕೆ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಇಳಿಕೆ ಮಾಡಿದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು. ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆ ಉತ್ತರ ಪ್ರದೇಶದ ಚುನಾವಣೆ ಇರುವಾಗ ಪೆಟ್ರೋಲ್, ಡೀಸೆಲ್‌ ಬೆಲೆಯನ್ನು ಸರ್ಕಾರ ಇಳಿಸಿದೆ. ಬಳಿಕ ಮತ್ತೆ ಆ ಬೆಲೆ ಏರಿಕೆ ಮಾಡಿದ್ದರು ಎಂದರು.


ಕೇಂದ್ರ ಸರ್ಕಾರದ ತಪ್ಪು ಆಡಳಿತ ನೀತಿಯಿಂದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ನವರಿಗೆ ರೇಷನಿಂಗ್ ಮೇಲೆ ಪೆಟ್ರೋಲ್ ಕೊಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈ ಪರಿಸ್ಥಿತಿ ಉಂಟಾಗಿದ್ದು, ದೇಶದಲ್ಲಿ ಹೇಗಿರಬಹುದು? ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಶೇ.30ರಷ್ಟು ಟ್ಯಾಕ್ಸ್ ವಿಧಿಸಿರುವುದರಿಂದ ಪೆಟ್ರೋಲ್ ಸಂಸ್ಥೆಗಳು ಕಂಪೆನಿಯನ್ನು ನಡೆಸದ ಸ್ಥಿತಿಯಲ್ಲಿದೆ ಎಂದರು.

ಇದನ್ನೂ ಓದಿ:ಪಶ್ಚಿಮ ಕರಾವಳಿಯಲ್ಲಿ ಜೂನ್ 1 ರಿಂದ ಮೀನುಗಾರಿಕೆ ತಾತ್ಕಾಲಿಕ ನಿಷೇಧ

ABOUT THE AUTHOR

...view details