ಕರ್ನಾಟಕ

karnataka

ETV Bharat / state

ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ - ಸಂಸದ ನಳಿನ್ ಕುಮಾರ್ ಕಟೀಲು

ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಮತ್ತೆ ಗರಿಗೆದರಿದೆ. ದಶಕದ ಬೇಡಿಕೆಗೆ ಈಗ ಮತ್ತೆ ಮರುಜೀವ ಬಂದಿದೆ. 'ಜೈ ತುಳುನಾಡು' ಎಂಬ ಸಂಘಟನೆಯು ಶನಿವಾರ ಹಮ್ಮಿಕೊಂಡ ಟ್ವಿಟರ್ ಅಭಿಯಾನಕ್ಕೆ ವಿವಿಧ ಸಂಘಟನೆಗಳು, ಶಾಸಕರು, ಸಂಸದರು, ಗಣ್ಯರು ಹಾಗೂ ಸಿನಿಮಾ ನಟರು ಬೆಂಬಲ ನೀಡಿದ್ದಾರೆ. ಇದರಿಂದ ಆದಷ್ಟು ಬೇಗ ತುಳು ಭಾಷೆಗೆ ಮಾನ್ಯತೆ ಸಿಗಬಹುದೆಂಬ ಮುನ್ಸೂಚನೆ ಕಾಣುತ್ತಿದೆ.

ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ

By

Published : Sep 10, 2019, 3:08 AM IST

ಮಂಗಳೂರು: ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಮತ್ತೆ ಗರಿಗೆದರಿದೆ. ದಶಕದ ಬೇಡಿಕೆಗೆ ಈಗ ಮತ್ತೆ ಮರುಜೀವ ಬಂದಿದೆ. 'ಜೈ ತುಳುನಾಡು' ಎಂಬ ಸಂಘಟನೆಯು ಶನಿವಾರ ಹಮ್ಮಿಕೊಂಡ ಟ್ವಿಟರ್ ಅಭಿಯಾನಕ್ಕೆ ವಿವಿಧ ಸಂಘಟನೆಗಳು, ಶಾಸಕರು, ಸಂಸದರು, ಗಣ್ಯರು ಹಾಗೂ ಸಿನಿಮಾ ನಟರು ಬೆಂಬಲ ನೀಡಿದ್ದಾರೆ. ಇದರಿಂದ ಆದಷ್ಟು ಬೇಗ ತುಳು ಭಾಷೆಗೆ ಮಾನ್ಯತೆ ಸಿಗಬಹುದೆಂಬ ಮುನ್ಸೂಚನೆ ಕಾಣುತ್ತಿದೆ.

ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ

ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಜೈ ತುಳುನಾಡು ಸಂಸ್ಥೆ ಈಗಾಗಲೇ ಮೂರು ಬಾರಿ ಟ್ವಿಟರ್ ಅಭಿಯಾನ ನಡೆಸಿತ್ತು. ಮೊದಲ ಬಾರಿ ಕಡಿಮೆ ಪ್ರೋತ್ಸಾಹ ದೊರೆತರೂ ಬಳಿಕ ಲಕ್ಷಾಂತರ ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಯನ್ನು ಸಾಂವಿಧಾನಿಕ ಭಾಷೆಯಾಗಿಸಲು ಪ್ರೋತ್ಸಾಹಿಸಿದ್ದಾರೆ‌.ಈ ಬಾರಿಯ ಟ್ವಿಟರ್ ಅಭಿಯಾನವು ಸೆ.7ರ ತಡರಾತ್ರಿ 12 ರಿಂದ ಸೆ.8ರ ತಡರಾತ್ರಿ 12 ರವರೆಗೆ ನಡೆಯಿತು. ಈ ಮೂಲಕ ಸುಮಾರ ಲಕ್ಷಾಂತರ ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.

ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ

ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಕರಾವಳಿಯ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ರಘುಪತಿ ಭಟ್, ಸುನೀಲ್ ಕುಮಾರ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ, ನಟರಾದ ಜಗ್ಗೇಶ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರೂಪೇಶ್ ಶೆಟ್ಟಿ ಮುಂತಾದವರು ಟ್ವಿಟ್ ಮಾಡಿದ್ದಾರೆ.

ತುಳು ಭಾಷೆಯನ್ನು ಸಾಂವಿಧಾನಿಕ ಭಾಷೆಯಾಗಿ ಮಾನ್ಯತೆ ಮಾಡಲು ಟ್ವಿಟರ್ ಅಭಿಯಾನ

ಅಲ್ಲದೆ ಈ ಟ್ವಿಟನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಂತಾದವರಿಗೆ ಟ್ಯಾಗ್ ಮಾಡಲಾಗಿದೆ.



ABOUT THE AUTHOR

...view details