ಮಂಗಳೂರು: ಮಂಗಳೂರು ಮೂಲದ ಕಲಾವಿದರ ತಂಡ ನಿರ್ಮಿಸಿರುವ ಪಾರ್ಟಿ ಸಾಂಗ್ ‘ಡ್ಯಾನ್ಸ್ ಡ್ಯಾನ್ಸ್’ ವಿಶ್ವದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿರುವ ಈ ತುಳು ಪಾರ್ಟಿ ಸಾಂಗ್ ಅನ್ನು ಯೂಟ್ಯೂಬ್ನಲ್ಲಿ ಒಂದೂವರೆ ಲಕ್ಷ ಜನರು ವೀಕ್ಷಿಸಿದ್ದಾರೆ.
ಮಂಗಳೂರಿನ ತಂಡವೊಂದು "ಡ್ಯಾನ್ಸ್ ಡ್ಯಾನ್ಸ್" ಹಾಡನ್ನು ನಿರ್ಮಿಸಿದೆ. ವೃತ್ತಿಪರವಾಗಿ ತಯಾರಿಸಿದ ಆಕರ್ಷಕ ನೃತ್ಯ ಸಂಯೋಜನೆ ಹೊಂದಿರುವ ಈ ಹಾಡು ಇತ್ತೀಚೆಗೆ N&N (ಡಾ.ನಿತಿನ್ ಎಸ್ & ನಿಶಾನ್ ಎಸ್) ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರಿ ವೀಕ್ಷಣೆ ಪಡೆದಿದೆ.
ಅಮೆರಿಕದ ಬಿಎಂಎಸ್ ರೇಡಿಯೋ ನೆಟ್ವರ್ಕ್ ಚಿಕಾಗೋದಲ್ಲಿ ಪ್ರಸಾರ ಆಗುತ್ತಿರುವ ಮೊದಲ ತುಳು ಹಾಡು ಇದಾಗಿದೆ. ಈ ಹಾಡು ವಿಶ್ವಾದ್ಯಂತ 25 ಕ್ಕಿಂತ ಹೆಚ್ಚು ರೇಡಿಯೋ ಸ್ಟೇಷನ್ಗಳಲ್ಲಿ ಪ್ರಸಾರವಾಗುತ್ತಿರುವ ಮೊದಲ ತುಳು ಹಾಡು ಆಗಿದೆ. ಭಾರತದ ಶಾರ್ಟ್ ವಿಡಿಯೋ ಆಪ್ "ಚಿಂಗಾರಿ" ಯಲ್ಲಿಯೂ ಈ ಹಾಡು ಮಿಂಚುತ್ತಿದೆ. ರೆಡ್ ಎಪಿಕ್ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡ ಮೊದಲ ತುಳು ಆಲ್ಬಂ ಹಾಡಾಗಿದ್ದು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.