ಕರ್ನಾಟಕ

karnataka

ETV Bharat / state

ಬೆಳ್ತಂಗಡಿ ಅರಣ್ಯ‌ ಇಲಾಖೆ ಗೋದಾಮಿಗೆ ಮತ್ತೆ ಕನ್ನ: ಮರ ಕಳವಿಗೆ ವಿಫಲ ಯತ್ನ - ಪೊಲೀಸ್ ಠಾಣಾಧಿಕಾರಿ ಕಲೈಮಾರ್ ಪರಿಶೀಲನೆ

ದ.ಕ ಜಿಲ್ಲೆಯ ಬೆಳ್ತಂಗಡಿ ಅರಣ್ಯ ಇಲಾಖೆ ಗೋದಾಮಿಗೆ ನಿನ್ನೆ ತಡರಾತ್ರಿ ಕನ್ನ ಹಾಕಿರುವ ಖದೀಮರು, ಮರಗಳವು ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ.  ರಾತ್ರಿ ಕಾವಲು ಕಾಯುತ್ತಿದ್ದ ಅರಣ್ಯ ರಕ್ಷಕ‌ ಇಲಾಖೆಯ ಸಿಬ್ಬಂದಿ ಗೋದಾಮಿನ ಶಟರ್ ತೆರೆದಾಗ ಕಳ್ಳರು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಅರಣ್ಯ‌ ಇಲಾಖೆ ಗೋದಾಮಿಗೆ ಮತ್ತೆ ಕನ್ನ

By

Published : Sep 29, 2019, 8:17 PM IST

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ಅರಣ್ಯ ಇಲಾಖೆ ಗೋದಾಮಿಗೆ ನಿನ್ನೆ ತಡರಾತ್ರಿ ಕನ್ನ ಹಾಕಿರುವ ಖದೀಮರು, ಮರಗಳವು ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ. ರಾತ್ರಿ ಕಾವಲು ಕಾಯುತ್ತಿದ್ದ ಅರಣ್ಯ ರಕ್ಷಕ‌ ಇಲಾಖೆಯ ಸಿಬ್ಬಂದಿ ಗೋದಾಮಿನ ಶಟರ್ ತೆರೆದಾಗ ಕಳ್ಳರು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಅರಣ್ಯ‌ ಇಲಾಖೆ ಗೋದಾಮಿಗೆ ಮತ್ತೆ ಕನ್ನ
ಗೋದಾಮಿನ ಹಿಂಬದಿ ಮನೆಯ ಕಾಂಪೌಂಡ್ ಹಾರಿ ಒಳ ನುಗ್ಗಿದ ಕಳ್ಳರು ಸುಮಾರು 2.30ರವರೆಗೆ ಗೋಡೆಯಲ್ಲಿ ಕನ್ನ ಕೊರೆದು ಒಳ ನುಗ್ಗಿದ್ದಾರೆ. ಕನ್ನ ಕೊರೆದ ಕೋಣೆಯಲ್ಲಿ ಹಾಲಮಡ್ಡಿ (ಧೂಪದ ಮರ) ಮಾತ್ರ ಸಿಕ್ಕಿದ್ದು, ಅದನ್ನು ಅಲ್ಲೆ ಬಿಟ್ಟು ಮುಂಭಾಗದಿಂದ ಮತ್ತೊಂದು ಕೋಣೆಯ ಶಟರ್ ತೆರೆಯಲು ಮುಂದಾಗಿದ್ದಾರೆ. ಈ ವೇಳೆ ಶಬ್ದ ಕೇಳಿ ಅರಣ್ಯ ರಕ್ಷಕ‌ ಇಲಾಖೆಯ ಸಿಬ್ಬಂದಿ ಎಚ್ಚರಗೊಂಡಿದ್ದರಿಂದಾಗಿ ಅವರು ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ಇಬ್ಬರು ಒಳ ನುಸುಳಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಮುಸುಕುಧಾರಿಗಳು ಸಿಸಿಟಿವಿ ಕ್ಯಾಮರಾದ ದಿಕ್ಕು ಬದಲಾಯಿಸಿರುವುದು ಮತ್ತೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಜುಲೈ 13ರಂದು ಇದೇ ಗೋದಾಮಿನ ಬೀಗ ಮುರಿದು ಕಳ್ಳರು ನುಸುಳಿ 344 ಕೆಜಿ ಗಂಧ ಕಳವು ಮಾಡಿದ್ದರು. ಈ ವೇಳೆ ಸುಮಾರು 54 ಕೆಜಿಯಷ್ಟು ಉಳಿದಿತ್ತು. ಇದರ ಸುಳಿವು ಸಿಕ್ಕಿ ಮತ್ತೆ ಕಳ್ಳತನಕ್ಕೆ ಯತ್ನಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಕೃತ್ಯ ನಡೆದ ಬಳಿಕ ಗೋದಾಮಿನ ಸುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿ ಕಲೈಮಾರ್, ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details