ಕರ್ನಾಟಕ

karnataka

ETV Bharat / state

ಕಡಬ ನ್ಯಾಯಬೆಲೆ ಅಂಗಡಿ, ಬ್ಯಾಂಕುಗಳಲ್ಲಿ ಭಾರೀ ಜನಸಂದಣಿ.. ನಿಯಂತ್ರಿಸಲು ಪೊಲೀಸರ ಹರಸಾಹಸ.. - kadaba latest news

ನ್ಯಾಯಬೆಲೆ ಅಂಗಡಿಗಳಲ್ಲಿ ಗೇರುಬೀಜ ಖರೀದಿ, ಈರುಳ್ಳಿ, ಮೆಣಸು ಮಾರಾಟ ಮಾಡುತ್ತಿರುವುದೇ ಜನ ಸೇರಲು ಮುಖ್ಯ ಕಾರಣ.

-kadaba
ಕಡಬ ನ್ಯಾಯಬೆಲೆ ಅಂಗಡಿ, ಬ್ಯಾಂಕುಗಳಲ್ಲಿ ಭಾರೀ ಜನಸಂದಣಿ

By

Published : Apr 13, 2020, 1:41 PM IST

ಕಡಬ:ಲಾಕ್​ಡೌನ್ ಆದೇಶದ ನಡುವೆಯೂ ಕಡಬ ಮತ್ತು ಕಲ್ಲುಗುಡ್ಡೆ ನ್ಯಾಯಬೆಲೆ ಅಂಗಡಿ, ಬ್ಯಾಂಕ್​ಗಳ ಮುಂಭಾಗದಲ್ಲಿ ಯಾವುದೇ ಮುಂಜಾಗೃತೆಯಿಲ್ಲದೆ ಭಾರೀ ಜನ ಸಂದಣಿ ಸೇರಿರುವುದು ಕಂಡು ಬಂದಿತು.

ನ್ಯಾಯಬೆಲೆ ಅಂಗಡಿಗಳಲ್ಲಿ ಗೇರುಬೀಜ ಖರೀದಿ, ಈರುಳ್ಳಿ, ಮೆಣಸು ಮಾರಾಟ ಮಾಡುತ್ತಿರುವುದೇ ಜನ ಸೇರಲು ಮುಖ್ಯ ಕಾರಣ. ಅಷ್ಟೇ ಅಲ್ಲ, ನ್ಯಾಯಬೆಲೆ ಅಂಗಡಿಳಲ್ಲಿ ಕೌಂಟರ್​ಗಳನ್ನು ಒಂದಕ್ಕೊಂದು ಬಹಳ ಸಮೀಪದಲ್ಲೇ ಮಾಡಿರುವುದು ಜನ ಕಿಕ್ಕಿರಿದು ಸೇರಲು ಮುಖ್ಯ ಕಾರಣವಾಗಿದೆ.

ಕಡಬ ನ್ಯಾಯಬೆಲೆ ಅಂಗಡಿ, ಬ್ಯಾಂಕುಗಳಲ್ಲಿ ಭಾರೀ ಜನಸಂದಣಿ..

ಕಡಬ,ಕಲ್ಲುಗುಡ್ಡೆ ಪ್ರದೇಶಗಳಲ್ಲಿ ಬ್ಯಾಂಕುಗಳಲ್ಲೂ ದೊಡ್ಡ ಮಟ್ಟದ ಸಾಲು ಕಂಡು ಬಂದಿತು. ತೀವ್ರ ಜನಸಂದಣಿಯಿಂದ ಪೊಲೀಸರು ಜನ ನಿಯಂತ್ರಣಕ್ಕೆ ಕಷ್ಟಪಡುವಂತಾಗಿದೆ.

ABOUT THE AUTHOR

...view details