ಮಂಗಳೂರು (ದ.ಕ): ಮದುವೆಯಾದ ಮೂರೇ ದಿನದಲ್ಲಿ ಯುವತಿಯೊಬ್ಬಳು ಪರಾರಿಯಾದ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಯುವತಿ ಮೂಲ್ಕಿ ಒಡೆಯರಬೆಟ್ಟು ಯುವಕನನ್ನು ಪ್ರೀತಿಸುತ್ತಿದ್ದು ಮನೆಯವರಿಗೂ ತಿಳಿದಿತ್ತು. ಆದರೆ ಅದನ್ನು ಮುಚ್ಚಿಟ್ಟು ಶಿಕ್ಷಕನಾಗಿದ್ದ ವರನೊಂದಿಗೆ ಡಿಸೆಂಬರ್ 28ರಂದು ವಿವಾಹ ಮಾಡಿಕೊಡಲಾಗಿತ್ತು.
ವಧುವಿನ ಕುಟುಂಬದ ಸಂಪ್ರದಾಯದಂತೆ ಮದುವೆಯ ಮೂರು ದಿನದ ಬಳಿಕ ವರನ ಮನೆಗೆ ವಧು ಹೋಗಬೇಕಿತ್ತು. ಅದರಂತೆ ವಿವಾಹಿತ ಯುವತಿಯನ್ನು ಜನವರಿ 2ರಂದು ವರನ ಮನೆ ಸೇರಿಬೇಕಿತ್ತು. ಆದರೆ ಅದರ ಮೊದಲ ದಿನವೇ ಯುವತಿ ಪ್ರಿಯಕರನೊಂದಿಗೆ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ. ಪ್ರಿಯಕರ ಮನೆಯ ಗೇಟಿನ ಬಳಿಗೆ ಬೈಕ್ನಲ್ಲಿ ಬಂದಿದ್ದು, ಆತನೊಂದಿಗೆ ಪರಾರಿಯಾಗಿದ್ದಾಳೆ.