ಕರ್ನಾಟಕ

karnataka

ETV Bharat / state

ಪುತ್ತೂರು: ಲಂಚ ಪಡೆಯುತ್ತಿದ್ದ ಸರ್ವೇಯರ್ ಎಸಿಬಿ ಬಲೆಗೆ

ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸರಕಾರಿ ಸರ್ವೇಯರ್​ ಜಮೀನಿನಲ್ಲಿ ಪೋಡಿಗೆ ಸ್ಕೆಚ್ ಮಾಡಲು ಲಂಚ ಪಡೆಯುತ್ತಿದ್ದಾಗ ಎ.ಸಿ.ಬಿ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ.

ಎಸಿಬಿ ಬಲೆಗೆ ಬಿದ್ದ ಸರ್ವೇಯರ್

By

Published : Oct 4, 2019, 6:09 PM IST

ಮಂಗಳೂರು:ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸರಕಾರಿ ಸರ್ವೇಯರ್ ಜಮೀನಿನಲ್ಲಿ ಪೋಡಿಗೆ ಸ್ಕೆಚ್ ಮಾಡಲು ಲಂಚ ಪಡೆಯುತ್ತಿದ್ದಾಗ ಎ. ಸಿ. ಬಿ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ.

ಇಂದು ಬೆಳಗ್ಗೆ ಉಪ್ಪಿನಂಗಡಿಯ ಹಿರೇಬಂಡಾಡಿಯ ಗೋಪಾಲ ಮುಗೇರ ಎಂಬವರು 2015 ರಲ್ಲಿ ತನ್ನ ತಾಯಿ ಮತ್ತು ಅಣ್ಣನ ಜಂಟಿ ಖಾತೆಯಲ್ಲಿದ್ದ ಜಮೀನನ್ನು ಪೋಡಿ ಮಾಡಲು ಅರ್ಜಿಯನ್ನು ಸಲ್ಲಿಸಿದ್ದರು. ಈವರೆಗೆ ಸರ್ವೇಯರ್ ಬಂದಿರಲಿಲ್ಲ. ಇದರ ವಿಷಯವನ್ನು ಕೇಳಿದಾಗ ಪುತ್ತೂರು ತಾಲೂಕು ಪಂಚಾಯತ್ ಕಚೇರಿಯ ಸರ್ವೇಯರ್ ಶಿವಕುಮಾರ್ 30,000 ಹಣವನ್ನು ಕೇಳುತಿದ್ದ. ಇದನ್ನು ಕಂತಿನಲ್ಲಿ 5000 ಹಣವನ್ನು ಕೊಡಲು ತಿಳಿಸಿದ್ದನು. ಅದರಂತೆ ಇಂದು ಬೆಳಗ್ಗೆ ಮೊದಲ ಕಂತಿನ ಹಣವನ್ನು ಉಪ್ಪಿನಂಗಡಿಯ ಆದಿತ್ಯ ಹೋಟೆಲ್​ನಲ್ಲಿ ಪಡೆಯುತ್ತಿರುವಾಗ ಕೂಡಲೇ ಎ. ಸಿ. ಬಿ. ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಎಂ. ಶಿವಕುಮರನನ್ನು ಬಂಧಿಸಿದ್ದಾರೆ.

ಇನ್ನು ಎ. ಸಿ. ಬಿ. ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ ನೇತ್ರತ್ವದಲ್ಲಿ ಪೊಲೀಸ್ ಯೋಗೀಶ್, ಶ್ಯಾಮಸುಂದರ್, ಹರಿಪ್ರಸಾದ್, ರಾಧಾಕೃಷ್ಣ ಕೆ, ಉಮೇಶ, ಡಿ. ರಾಧಾಕೃಷ್ಣ, ವೈಶಾಲಿ, ಪ್ರಶಾಂತ್, ರಾಕೇಶ್, ರಾಜೇಶ್, ಗಣೇಶ್ ಇವರು ಸಹಕರಿಸಿದ್ದಾರೆ.

ABOUT THE AUTHOR

...view details