ಕರ್ನಾಟಕ

karnataka

ETV Bharat / state

ತಣ್ಣೀರುಬಾವಿ ಬೀಚ್‌ನಲ್ಲಿ ರಾಜ್ಯಮಟ್ಟದ ಸರ್ಫಿಂಗ್ ಓಪನ್ ಚಾಂಪಿಯನ್‌ಶಿಪ್ - Mangalore Surf Club

ರಾಜ್ಯಮಟ್ಟದ ಸರ್ಫಿಂಗ್ ಓಪನ್ ಚಾಂಪಿಯನ್ ಶಿಪ್​ ಅನ್ನು ಮಂಗಳೂರು ಸರ್ಫ್​ ಕ್ಲಬ್​ ವತಿಯಿಂದ ತಣ್ಣೀರುಬಾವಿ ಬೀಚ್​ನಲ್ಲಿ ಆಯೋಜಿಸಲಾಗಿದೆ.

ಸರ್ಫಿಂಗ್ ಚಾಂಪಿಯನ್ ಶಿಪ್
ಸರ್ಫಿಂಗ್ ಚಾಂಪಿಯನ್ ಶಿಪ್

By

Published : Mar 7, 2021, 3:55 PM IST

Updated : Mar 7, 2021, 5:20 PM IST

ಮಂಗಳೂರು:ಮಂಗಳೂರು ಸರ್ಫ್ ಕ್ಲಬ್ ವತಿಯಿಂದ 'ಮಂಗಳೂರು ಓಪನ್ ಸರ್ಫ್' ಎಂಬ ರಾಜ್ಯಮಟ್ಟದ ಸರ್ಫಿಂಗ್ ಓಪನ್ ಚಾಂಪಿಯನ್ ಶಿಪ್​ ಅನ್ನು ನಗರದ ಹೊರವಲಯದ ತಣ್ಣೀರುಬಾವಿ ಬೀಚ್​ನಲ್ಲಿ ನಡೆಸಲಾಗುತ್ತಿದೆ.

ರಾಜ್ಯಮಟ್ಟದ ಸರ್ಫಿಂಗ್ ಓಪನ್ ಚಾಂಪಿಯನ್‌ಶಿಪ್

ಈ ಸರ್ಫಿಂಗ್ ಚಾಂಪಿಯನ್ ಶಿಪ್​ನಲ್ಲಿ ಭಾಗವಹಿಸಲು ಕರ್ನಾಟಕದ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು‌ ಆಗಮಿಸಿದ್ದಾರೆ. ಕರ್ನಾಟಕದಲ್ಲಿ 8 ಸರ್ಫ್ ಶಾಲೆಗಳಿದ್ದು, ಈ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಾಳುಗಳಾಗಿ ಆಗಮಿಸಿದ್ದಾರೆ. 12, 16ನೇ ವಯಸ್ಸಿನೊಳಗಿನ ಬಾಲಕ-ಬಾಲಕಿಯರು, 20ರೊಳಗಿನ ಯುವಕ ಯುವತಿಯರು ಹಾಗೂ 20ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: ಇಂಡೋ-ನೇಪಾಳ್ ಜೂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲ್ಲಡ್ಕ ಕರಾವಳಿ ಕುವರರು

ಮಂಗಳೂರು ಸರ್ಫ್ ಕ್ಲಬ್ ಸೆಕ್ರೆಟರಿ ಚಿರಾಗ್ ಮಾತನಾಡಿ, ಮಂಗಳೂರು ಸರ್ಫ್ ಓಪನ್ ಸ್ಪರ್ಧೆ ಇಂಡಿಯಾ ಇನ್ ಕ್ರೆಡಿಬಲ್ ಅವರು ಆಯೋಜನೆ ಮಾಡಿದ್ದು, ಇದು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಒಂದು ಭಾಗ. ಆದ್ದರಿಂದ ಜನಪ್ರತಿನಿಧಿಗಳ ಸಹಕಾರದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ.‌ ಸರ್ಫಿಂಗ್ ನಡೆಸಲು ಸಮುದ್ರದ ಅಲೆಗಳೇ ಮುಖ್ಯ. ತಣ್ಣೀರುಬಾವಿಯಲ್ಲಿ ಅಲೆಗಳು ಉತ್ತಮವಾಗಿದ್ದು, ಸ್ಯಾಂಡ್ ಬ್ಯಾಂಕ್ ಕೂಡ ಮುಂದೆ ಇದೆ. ಇದು ಸರ್ಫಿಂಗ್​ಗೆ ಪೂರಕವಾಗಿದೆ ಎಂದು ಹೇಳಿದರು.

Last Updated : Mar 7, 2021, 5:20 PM IST

ABOUT THE AUTHOR

...view details