ಸುಳ್ಯ:ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನೂಷ್ 625ಕ್ಕೆ 625 ಅಂಕ ಗಳಿಸುವ ಮೂಲಕ ಎಸ್ಎಸ್ಎಲ್ಸಿ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಸುಳ್ಯದ ಗ್ರಾಮೀಣ ವಿದ್ಯಾರ್ಥಿ ಎಸ್ಎಸ್ಎಲ್ಸಿ ಟಾಪರ್ - ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನೂಷ್ ಎ.ಎಲ್. 625ಕ್ಕೆ 625 ಅಂಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಎಸ್ಎಸ್ಎಲ್ಸಿ ಟಾಪರ್
ಈತ ಸುಳ್ಯ ತಾಲೂಕಿನ ಬಳ್ಪದ ಲೋಕೇಶ್ ಹಾಗೂ ಉಷಾ ದಂಪತಿಯ ಪುತ್ರ. ಈತನ ತಂದೆ ಲೋಕೇಶ್ ಅವರು ಗುತ್ತಿಗಾರು ಮೆಸ್ಕಾಂ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಉಷಾ ಅವರು ಗೃಹಿಣಿ. ಸಹೋದರ ಆಕಾಶ್ ಆರನೇ ತರಗತಿ ವಿದ್ಯಾರ್ಥಿ.
ಎಸ್ಎಸ್ಎಲ್ಸಿ ಟಾಪರ್ ಆಗಿರುವ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅನೂಷ್, ತನ್ನ ಸಂತಸ ವ್ಯಕ್ತಪಡಿಸಿದ್ದು, ಮುಂದಕ್ಕೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್, ಐಎಫ್ಎಸ್ ಶ್ರೇಣಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಗುರಿ ಇಟ್ಟುಕೊಂಡಿದ್ದಾನೆ. ಅನೂಷ್ ಗೆ ಈಟಿವಿ ಭಾರತದ ಕಡೆಯಿಂದ ಆಲ್ ದಿ ಬೆಸ್ಟ್.
Last Updated : Aug 10, 2020, 9:30 PM IST