ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ, ಐವನ್ ಡಿಸೋಜಾ ಶೀಘ್ರ ಗುಣಮುಖರಾಗಲಿ : ದರ್ಗಾದಲ್ಲಿ ವಿಶೇಷ ಪ್ರಾರ್ಥನೆ - ಕೊರೊನಾ ಸೋಂಕಿತ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಹಾಗೂ ಅವರ ಪತ್ನಿ ಕವಿತಾ ಡಿಸೋಜಾ ಕೊರೊನಾದಿಂದ ಶೀಘ್ರ ಗುಣಮುಖರಾಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

prayer
prayer

By

Published : Aug 7, 2020, 10:34 AM IST

Updated : Aug 7, 2020, 10:51 AM IST

ಮಂಗಳೂರು: ಕೊರೊನಾ ಸೋಂಕಿತರಾದ ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಹಾಗೂ ಅವರ ಪತ್ನಿ ಕವಿತಾ ಡಿಸೋಜಾ ಶೀಘ್ರ ಗುಣಮುಖರಾಗಲಿ ಎಂದು ಹಜ್ರತ್​​ ಸಯ್ಯದ್ ಮೌಲಾನ ವಲಿಯುಲ್ಲಾ(ಖ.ಸ) ದರ್ಗಾ ಶರೀಫ್​ನಲ್ಲಿ ಪ್ರಾರ್ಥನೆ ನೆರವೇರಿತು.

ದರ್ಗಾದಲ್ಲಿ ಪ್ರಾರ್ಥನೆ

ಕೊರೊನಾ ಸೋಂಕು ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರೆಲ್ಲರೂ ಶೀಘ್ರ ಗುಣಮುಖರಾಗಿ ಜನಸಾಮಾನ್ಯರ ಸೇವೆ ಮಾಡುವ ಭಾಗ್ಯ ಒದಗಲಿ ಎಂದು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಕೆ. ಶಾಹುಲ್ ಹಮೀದ್ ಅವರ ನೇತೃತ್ವದಲ್ಲಿ ಕೇಂದ್ರ ಜುಮಾ ಮಸೀದಿಯ ಧರ್ಮ ಗುರು ಜನಾಬ್ ಅಬ್ದುಲ್ ರಹಿಮಾನ್ ಫೈಜಿ ಹಾಗೂ ಸಾಗು ಬದ್ರಿಯಾ ಜುಮಾ ಮಸೀದಿಯ ಖತೀಬ್ ಜನಾಬ್ ಇ.ಎಮ್ ಅಬ್ದುಲ್ಲಾ ಮದನಿ ಸಾಗು ಅವರು ಯಾಸೀನ್ ಪಠಿಸಿ ದರ್ಗಾ ಶರೀಫ್​ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ದರ್ಗಾದಲ್ಲಿ ಪ್ರಾರ್ಥನೆ

ಈ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದ ಜಮಾತ್​ನ ಹಿರಿಯರಾದ ಹಾಜಿ ಶಾಹುಲ್ ಹಮೀದ್ ಸಂತಕಟ್ಟೆ, ಜಮಾತ್ ಉಪಾಧ್ಯಕ್ಷ ಹಾಜಿ ಪಿ.ಸಿ.ಮೊಹಿದೀನ್, ಅಬ್ದುಲ್ ರಹಮಾನ್ ಹಾಜಿ ಕದಿಕೆ ಕೂಡಾ ಆರೋಗ್ಯವಂತರಾಗಲಿ ಎಂದು ಪ್ರಾರ್ಥನೆ ನೆರವೇರಿಸಲಾಯಿತು.

Last Updated : Aug 7, 2020, 10:51 AM IST

ABOUT THE AUTHOR

...view details