ಕರ್ನಾಟಕ

karnataka

ETV Bharat / state

ಬೆಳ್ತಂಗಡಿ: ತಂದೆಯನ್ನೇ ಕೊಲೆಗೈದಿದ್ದ ಮಗನ ಬಂಧನ - ಬೆಳ್ತಂಗಡಿ ಕೊಲೆ ಪ್ರಕರಣ

ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

son-arrested-in-father-murder-case
ತಂದೆಯನ್ನೇ ಕೊಲೆಗೈದಿದ್ದ ಮಗನ ಬಂಧನ

By

Published : Aug 27, 2020, 1:24 AM IST

ಬೆಳ್ತಂಗಡಿ:ತಂದೆಯನ್ನೇ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದ ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಜೂನಿಯರ್ ಕಾಲೇಜ್ ಸಮೀಪದ ನಿವಾಸಿ ಕಾರು ಚಾಲಕ ವಾಸು ಸಪಲ್ಯ (66) ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ವಾಸು ಅವರ ಮಗ ದಯಾನಂದ್ (32) ಎಂಬಾತನನ್ನು ಪೊಲೀಸರು ಬುಧವಾರ ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಬಂಧಿಸಿದ್ದಾರೆ.

ಆ. 24ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಕೃತ್ಯದ ಬಳಿಕ ಇವರ ಮೂರನೇ ಮಗ ದಯಾನಂದ ನಾಪತ್ತೆಯಾಗಿದ್ದು, ಮೊಬೈಲ್ ಫೋನ್​ ಸ್ವಿಚ್ ಅಫ್ ಆಗಿತ್ತು. ಹೀಗಾಗಿ ಆತನೇ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು.

ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಆ. 26ರ ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಬಂಧಿಸಿದೆ.

ABOUT THE AUTHOR

...view details