ಶಿರಸಿ :ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿ ಬಂದು ಶಿರಸಿ ಹೆಸ್ಕಾಂ ಸಿಬ್ಬಂದಿ ಮುಳುಗಡೆ ಪ್ರದೇಶದ ವಿದ್ಯುತ್ ವ್ಯವಸ್ಥೆ ಸರಿಪಡಿಸಿಕೊಟ್ಟಿದ್ದು, ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ವಿದ್ಯುತ್ ಸಿಬ್ಬಂದಿ ನೀರಿನಲ್ಲಿ ಈಜಿ ಬಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಶಿರಸಿ ತಾಲೂಕಿನ ಬನವಾಸಿಯಲ್ಲಿ ವರದಾ ನದಿ ಉಕ್ಕಿ ಹರಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ನದಿ ಪಾತ್ರದ ಗ್ರಾಮಗಳಾದ ಅಜ್ಜರಣಿ ಮತ್ತು ಮತಗುಣಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಶಿರಸಿ ಹೆಸ್ಕಾಂ ಸಿಬ್ಬಂದಿ ನದಿಯಲ್ಲಿ ಈಜಿಕೊಂಡು ಬಂದು ವಿದ್ಯುತ್ ವ್ಯವಸ್ಥೆ ಸರಿಪಡಿಸಿಕೊಟ್ಟಿದ್ದಾರೆ.