ಕರ್ನಾಟಕ

karnataka

ETV Bharat / state

ಜಿಡಿಪಿ ಇಷ್ಟು ಕಡಿಮೆ ಯಾವತ್ತು ಬಂದಿಲ್ಲ, ಇದಕ್ಕೆ ಮೋದಿ ಸರ್ಕಾರದ ಆರ್ಥಿಕ ನೀತಿ ಕಾರಣ: ಸಿದ್ದರಾಮಯ್ಯ

ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ಬಲವರ್ಧನೆ ಆಗುವುದಿಲ್ಲ. ಕ್ರೆಡಿಟ್ ಕೆಪಾಸಿಟಿ ಜಾಸ್ತಿ ಆಗುವುದಿಲ್ಲ. ಬ್ಯಾಂಕುಗಳು ಈಗ ಸಂಕಷ್ಟದಲ್ಲಿವೆ. ಕೇಂದ್ರ ಬಿಜೆಪಿ ಸರ್ಕಾರದ ಹಸ್ತಕ್ಷೇಪ ಜಾಸ್ತಿಯಾಗಿದೆ. ಇಡೀ ಆರ್ಥಿಕ ವ್ಯವಸ್ಥೆ ದೇಶದಲ್ಲಿ ದುರ್ಬಲ ಆಗಿದೆ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ

By

Published : Aug 31, 2019, 1:16 PM IST

ಮಂಗಳೂರು:ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಜಿಡಿಪಿ ಇಷ್ಟು ಕಡಿಮೆ ಯಾವತ್ತೂ ಬಂದಿಲ್ಲ .ಇದಕ್ಕೆ ಮೋದಿ ಸರ್ಕಾರದ ಆರ್ಥಿಕ ನೀತಿಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರವು ಬ್ಯಾಂಕ್​​ಗಳ ವಿಲೀನ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ ಮಂಗಳೂರಿನಲ್ಲಿ ಮಾತನಾಡಿದ ಅವರು, ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ಬಲವರ್ಧನೆ ಆಗುವುದಿಲ್ಲ. ಕ್ರೆಡಿಟ್ ಕೆಪಾಸಿಟಿ ಜಾಸ್ತಿ ಆಗುವುದಿಲ್ಲ. ಬ್ಯಾಂಕುಗಳು ಈಗ ಸಂಕಷ್ಟದಲ್ಲಿವೆ. ಕೇಂದ್ರ ಬಿಜೆಪಿ ಸರ್ಕಾರದ ಹಸ್ತಕ್ಷೇಪ ಜಾಸ್ತಿಯಾಗಿದೆ. ಇಡೀ ಆರ್ಥಿಕ ವ್ಯವಸ್ಥೆ ದೇಶದಲ್ಲಿ ದುರ್ಬಲ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜಿಡಿಪಿ ಶೇ. 5ಕ್ಕೆ ಬಂದು ನಿಂತಿದೆ. ಆದರೆ ಅದು ಸರಿಯಾದ ಲೆಕ್ಕಾಚಾರ ಅಲ್ಲ. 3.5 ಅಥವಾ 4ಕ್ಕೆ ಇರಬಹುದು. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದರು.

ABOUT THE AUTHOR

...view details