ಮಂಗಳೂರು:ಈವರೆಗೆ ಮಾಧ್ಯಮದ ಮುಂದೆ ಕಾಣಿಸಿಕೊಳ್ಳದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪುತ್ರ ಸಂತೋಷ್ ಜೆ. ಪೂಜಾರಿ ಅವರು ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಜನಾರ್ದನ ಪೂಜಾರಿ ಪುತ್ರ ಪ್ರಚಾರ - ಪ್ರಚಾರ
ತನ್ನ ತಂದೆ ಲೋಕಸಭಾ ಚುನಾವಣೆಗೆ ನಿಂತ ಆರಂಭದಿಂದಲೂ ಇಂದಿನವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪ್ರತಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಜಿಲ್ಲೆಯ ಮೂಲೆ ಮೂಲೆಗೆ ತೆರಳಿ ಪ್ರಚಾರ ನಡೆಸುತ್ತಿರುವುದಾಗಿ ಜನಾರ್ದನ ಪೂಜಾರಿ ಪುತ್ರ ಸಂತೋಷ್ ಜೆ. ಪೂಜಾರಿ ಹೇಳಿದರು.
ತನ್ನ ತಂದೆ ಜನಾರ್ದನ ಪೂಜಾರಿ ಅವರು ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗುವ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಈಗ ಮಿಥುನ್ ರೈಗೆ ಇದೆ. ಅದಕ್ಕಾಗಿ ಅವರ ಪರ ದುಡಿಯುವಂತೆ ತಿಳಿಸಿದ್ದಾರೆ. ತನ್ನ ತಂದೆ ಲೋಕಸಭಾ ಚುನಾವಣೆಗೆ ನಿಂತ ಆರಂಭದಿಂದಲೂ ಇಂದಿನವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪ್ರತಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಜಿಲ್ಲೆಯ ಮೂಲೆ ಮೂಲೆಗೆ ತೆರಳಿ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದರು.
ದ.ಕ ಜಿಲ್ಲೆಯ ಲೋಕಸಭಾ ಕ್ಷೇತ್ರ ಕಳೆದ 28 ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಮೋದಿ ಹೆಸರಿನಲ್ಲಿ ಮತ ಹಾಕಿದರೆ ಜಿಲ್ಲೆಗೆ ಪ್ರಬಲ ಪ್ರತಿನಿಧಿ ಸಿಗುವುದಿಲ್ಲ. ದಿಲ್ಲಿಗೆ ಪ್ರತಿನಿಧಿ ಸಿಗುತ್ತಾರೆ. ಪ್ರಬಲ ಪ್ರತಿನಿಧಿ ಬೇಕಾ? ದಿಲ್ಲಿಗೆ ಪ್ರತಿನಿಧಿ ಬೇಕಾ ಎಂದು ಜನರು ಚಿಂತಿಸಬೇಕಾಗಿದೆ ಎಂದರು.