ಕರ್ನಾಟಕ

karnataka

ETV Bharat / state

ಶ್ರೀಗಂಧ ಮರ, ವಾಹನ ಕಳವು ಪ್ರಕರಣ: 40 ವರ್ಷಗಳ ಬಳಿಕ ಆರೋಪಿ ಸೆರೆ

ಶ್ರೀಗಂಧ ಮರ ಹಾಗೂ ವಾಹನ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ನಾಲ್ಕು ದಶಕಗಳ ಬಳಿಕ ಕಡಬ ಪೊಲೀಸರು ಬಂಧಿಸಿದ್ದಾರೆ.

By

Published : Feb 27, 2023, 10:07 PM IST

ಅಬ್ಬುಬಕ್ಕರ್
ಅಬ್ಬುಬಕ್ಕರ್

ಕಡಬ :ಕಡಬ, ರಾಣೆಬೆನ್ನೂರು ಮತ್ತು ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದಲ್ಲಿ ಆರೋಪಿಯಾಗಿ ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ತಾಲೂಕಿನ ಕಾಡೂರು ಕೊಡಿಗೆ ನಿವಾಸಿ ಅಬ್ಬುಬಕ್ಕರ್ (63) ಬಂಧಿತ ಆರೋಪಿ.

ಈತನ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ 53/1984 ಕಲಂ. 62, 71(a), 80,86,87 KF ಕಾಯ್ದೆ, 379,411 ಐಪಿಸಿ, ಮತ್ತು ರಾಣೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12/1985 ಕಲಂ 279,337, 411 ಐಪಿಸಿ ಮತ್ತು ಕಲಂ 86,87 ಕೆಎಫ್​ ಆಕ್ಟ್ ಹಾಗೂ ಮೈಸೂರು ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 159/1984 ಕಲಂ, 379 ಐಪಿಸಿ ಪ್ರಕರಣಗಳಲ್ಲೂ ವಾರಂಟ್ ಜಾರಿಯಾಗಿತ್ತು. ಈತ ಸುಮಾರು 40 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಮೂಡಿಗೆರೆ ತಾಲೂಕಿನ ಬಾಳೂರು ಎಂಬಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.

ಇದನ್ನೂ ಓದಿ:ಪೊಲೀಸ್​ ಠಾಣೆಗೆ ನುಗ್ಗಿ ಅಸಭ್ಯ ವರ್ತನೆ: ತುಮಕೂರು ಯೂತ್ ಕಾಂಗ್ರೆಸ್ ಅಧ್ಯಕ್ಷನ ಬಂಧನ

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್ ಮತ್ತು ಕಡಬ ಠಾಣಾ ಉಪನಿರೀಕ್ಷಕ ಹರೀಶ್ ಆರ್ ಹಾಗೂ ಎಎಸ್​ಐ ಶಿವರಾಮ ಮಾರ್ಗದರ್ಶನದಲ್ಲಿ ಕಡಬ ಠಾಣಾ ಸಿಬ್ಬಂದಿಗಳಾದ ರಾಜು ನಾಯಕ್, ಹೆಚ್.ಸಿ ಭವಿತ್ ರಾಜ್, ಸಿರಾಜುದ್ದೀನ್ ಎಂಬುವರ ತಂಡ ಮೂಡಿಗೆರೆ ತಾಲೂಕು ಬಾಳೂರು ಎಂಬಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. 1984ರಲ್ಲಿ ನಡೆದ ಪ್ರಕರಣವು ಲಾಂಗ್ ಪೆಂಡಿಗ್ ಕೇಸ್ ಎಂದು ನ್ಯಾಯಾಲಯದಲ್ಲಿ ತಿರಸ್ಕಾರಗೊಂಡಿತ್ತು ಎನ್ನಲಾಗಿದೆ.

ಇದನ್ನೂ ಓದಿ:ಸ್ನೇಹಿತನ ಕಿರುಕುಳಕ್ಕೆ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಸಿಬ್ಬಂದಿಗೆ ಬಹುಮಾನ: ಇದೀಗ ಮತ್ತೆ ಪುತ್ತೂರು ನ್ಯಾಯಾಲಯವು ಈಗ ಲಾಂಗ್ ಪೆಂಡಿಂಗ್ ಕೇಸ್(ಎಲ್‌ಪಿಸಿ) ವಾರಂಟ್ ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಆಮ್ಟೇ ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ:ರಾಮನಗರ: ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ

ABOUT THE AUTHOR

...view details