ಕರ್ನಾಟಕ

karnataka

ETV Bharat / state

ಪತ್ರಿಕೆ ಹೆಸರಲ್ಲಿ ಮಹಿಳೆ ಮನೆಗೆ ನುಗ್ಗಿ ಅಸಭ್ಯ ವರ್ತನೆ, ಹಣಕ್ಕೆ ಬೇಡಿಕೆ - mangalore news

ಮೂವರು ಆರೋಪಿಗಳು ಮರವೂರಿನಲ್ಲಿರುವ ಮಹಿಳೆಯ ಮನೆಗೆ ನ.26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತೆರಳಿದ್ದಾರೆ. ಅಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದು , ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

rushed to woman home and demand for money
ಪತ್ರಿಕೆ ಹೆಸರಲ್ಲಿ ಮಹಿಳೆ ಮನೆಗೆ ನುಗ್ಗಿ ಅಸಭ್ಯ ವರ್ತನೆ, ಹಣಕ್ಕೆ ಬೇಡಿಕೆ

By

Published : Nov 30, 2020, 10:06 PM IST

ಮಂಗಳೂರು: ನಗರದ ಬಜ್ಪೆ ಸಮೀಪದ ಮರವೂರಿನಲ್ಲಿರುವ ಮನೆಯೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಯೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ವಾರ್ತಾ ಪತ್ರಿಕೆ ಹೆಸರಿನಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯ ಸುಭಾಷ್ ಶೆಟ್ಟಿ, ಮನೋಜ್ ಉಳ್ಳಾಲ್ ಮತ್ತು ನಿತಿನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಈ ಮೂವರು ಆರೋಪಿಗಳು ಮರವೂರಿನಲ್ಲಿರುವ ಮಹಿಳೆಯ ಮನೆಗೆ ನ.26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತೆರಳಿದ್ದಾರೆ. ಅಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದು ಮೊಬೈಲ್‌ನಲ್ಲಿ ಫೋಟೊ ತೆಗೆದಿದ್ದಾರೆ.

ಆ ಬಳಿಕ, ನಿಮ್ಮಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯಲ್ಲಿ ಮತ್ತು ಸ್ಟೇಟ್ ಚಾನೆಲ್‌ನಲ್ಲಿ ಸುದ್ದಿ ಬಿತ್ತರಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆದರೆ, ಒಂದು ಲಕ್ಷ ರೂ. ಕೊಟ್ಟರೆ ಸುದ್ದಿ ಹಾಕುವುದಿಲ್ಲ ಎಂದು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರಿಂದ ಬೆದರಿದ ಮನೆಯವರು 15 ಸಾವಿರ ರೂ.ನ್ನು ಕೊಟ್ಟಿದ್ದಾರೆ. ಉಳಿದ ಹಣವನ್ನು ಆಮೇಲೆ ಕೊಡುವುದಾಗಿ ಹೇಳಿ ಕಳುಹಿಸಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details