ಪುತ್ತೂರು: ಚಲಿಸುತ್ತಿದ್ದ ರೈಲಿನಲ್ಲಿ ದರೋಡೆ ಪ್ರಕರಣ ಜರುಗಿದೆ. ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಅನ್ನು ದರೋಡೆಕೋರನೊಬ್ಬ ದೋಚಿ ಪರಾರಿಯಾಗಿದ್ದಾನೆ. ಈ ಘಟನೆ ಕಬಕ ಮತ್ತು ಪುತ್ತೂರು ರೈಲ್ವೇ ನಿಲ್ದಾಣ ಸಮೀಪದ 1.ಕಿಮೀ ದೂರದ ಹಾರಾಡಿ, ಸಿಟಿ ಗುಡ್ಡೆ ಮಧ್ಯೆ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ನಡೆದಿದೆ.
ಘಟನೆಯ ವಿವರ:ಆ.30ರ ನಸುಕಿನ ಜಾವ 2.30ರ ಸುಮಾರಿಗೆ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಕಾರವಾರ ಮೂಲದವರಾದ ಅಧ್ಯಾಪಕ ರಮೇಶ್ ಮತ್ತು ನಿರ್ಮಲಾ ದಂಪತಿ ಚಿನ್ನಾಭರಣ ಮತ್ತು ನಗದಿದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡಿದ್ದಾರೆ. ಆ.29ರಂದು ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ರೈಲನ್ನು ದಂಪತಿ ಹತ್ತಿದ್ದಾರೆ. ಆ.30ರ ನಸುಕಿನ ಜಾವ 2.20ರ ಸುಮಾರಿಗೆ ರೈಲು ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಬಂದಿದೆ.
20.30ರ ಸುಮಾರಿಗೆ ರೈಲು ಕಾರವಾರಕ್ಕೆ ಹೊರಟ ವೇಳೆ ಪುತ್ತೂರು ಹಾರಾಡಿ ಬ್ರಿಡ್ಜ್ ದಾಟಿ ಮುಂದೆ ಸಿಟಿ ಗುಡ್ಡೆ ತುಲುಪುತ್ತಿದ್ದಂತೆ, ನಿರ್ಮಲಾ ಅವರು ಮಲಗುವ ವೇಳೆ ತಲೆಯ ಅಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಇರಿಸಿದ್ದ ವ್ಯಾನಿಟಿ ಬ್ಯಾಗ್ ಅನ್ನು ಅಪರಿಚಿತ ವ್ಯಕ್ತಿ ಎಳೆಯುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಗಾಬರಿಗೊಂಡು ಆ ವ್ಯಕ್ತಿಯನ್ನು ದೂಡಿದ್ದಾರೆ.