ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತ ತಪ್ಪಿಸಲು ವಿಶಿಷ್ಟ ಪ್ರಯತ್ನ: ಬೀದಿ‌ ನಾಯಿಗಳಿಗೆ ಜೀವದುಡುಗೊರೆ ಕೊಟ್ಟ ಪ್ರಾಣಿಪ್ರಿಯ! - young man

ಬೀದಿ ನಾಯಿಗಳೆಂದರೆ ಕೆಲವರಿಗೆ ಅಸಡ್ಡೆ. ತುತ್ತು ಅನ್ನ ಕೊಡದ ಮನುಷ್ಯ ಅವುಗಳನ್ನು ಪ್ರೀತಿಯಿಂದ ಕಾಣೋದು ಇನ್ನೂ ದೂರ. ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಯುವಕನೊಬ್ಬ ಮನಮಿಡಿಯುವ ಹವ್ಯಾಸಕ್ಕೆ ಕೈ ಹಾಕಿದ್ದಾನೆ.

ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿರುವ ತೌಸಿಫ್ ಅಹಮದ್

By

Published : Apr 27, 2019, 6:23 PM IST

ಮಂಗಳೂರು: ರಾತ್ರಿ ವೇಳೆ ಅಪಘಾತಕ್ಕೆ ಸಿಲುಕಿ ವಿನಾ ಕರಣ ಪ್ರಾಣ ಕಳೆದುಕೊಳ್ಳುವ ಬೀದಿ ನಾಯಿಗಳ ರಕ್ಷಣೆಗೆ ಮುಂದಾಗಿರುವ ಪ್ರಾಣಿ ಪ್ರಿಯನ ಹವ್ಯಾಸವನ್ನು ನೀವು ಮೆಚ್ಚಲೇಬೇಕು. ತೌಸಿಫ್ ಅಹಮದ್ ಎಂಬ ಯುವಕ ಇಂತಹ ವಿಶಿಷ್ಟ ಹವ್ಯಾಸಕ್ಕೆ ಮುಂದಾಗಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಬೀದಿ ನಾಯಿಗಳು ಸಾಕಷ್ಟು. ಇವುಗಳ ರಕ್ಷಣೆಗೆ ಮುಂದಾಗಿರುವ ತೌಸಿಫ್, ಅವುಗಳಿಗೆ ರಿಫ್ಲೆಕ್ಟೆಡ್ ಎಂಬ​ ಬೆಲ್ಟ್​ಗಳನ್ನು​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿದ್ದಾರೆ. ಈ ರೀತಿ ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವುದರಿಂದ ವಾಹನ ಸವಾರರ ಪ್ರಾಣವೂ ಉಳಿಯುತ್ತೆ. ಜೊತೆಗೆ ಆಗುವ ಅನಾಹುತವೂ ತಪ್ಪಿಸಿದಂತಾಗುತ್ತೆ.

ಹೇಗೆ ಅಂತಿರಾ?

ತೌಸಿಫ್ ಅಹಮದ್​ ಈಗಾಗಲೇ ಸುರತ್ಕಲ್, ಕುಳಾಯಿ, ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್ ಗೇಟ್ ಪ್ರದೇಶ ಸೇರಿದಂತೆ ಇತರೆಡೆ 500ಕ್ಕೂ ಅಧಿಕ ನಾಯಿಗಳಿಗೆ ರಿಫ್ಲೆಕ್ಟೆಡ್​ ಬೆಲ್ಟ್​ ಅಳವಡಿಸಿದ್ದಾರಂತೆ. ಈ ರೀತಿ ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವುದರಿಂದ ರಾತ್ರಿ ವೇಳೆ ವಾಹನಗಳ ಹೆಡ್​ಲೈಟ್​​​ ಈ​ ಬೆಲ್ಟ್ ಮೇಲೆ ಬೀಳುತ್ತದೆ. ಆಗ ಈ​ ಬೆಲ್ಟ್ ಮಿನುಗುವುದರಿಂದ ವಾನಹ ಸವಾರರು ನೋಡಿಕೊಂಡು ನಿಧಾನವಾಗಿ ಚಲಿಸಬಹುದು. ಇಲ್ಲಿ ಇಬ್ಬರ ಪ್ರಾಣವೂ ಉಳಿಯುತ್ತದೆ. ಇಂದೋರ್​ನಿಂದ ಪ್ರತಿ ಬೆಲ್ಟ್​ಗೆ 40 ರೂ. ಕೊಟ್ಟು ಇವುಗಳನ್ನು ತರಿಸಲಾಗುತ್ತಿದೆ. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದಲ್ಲಿ ಮಿನುಗುವುದರಿಂದ ಪ್ರಾಣ ಹಾನಿ ಆಗವುದಿಲ್ಲ ಎನ್ನುತ್ತಾರೆ ತೌಸಿಫ್ ಅಹಮದ್.

ರಿಫ್ಲೆಕ್ಟೆಡ್​ ಬೆಲ್ಟ್​ ಕಟ್ಟುವ ಮೂಲಕ ಮೂಕ ಪ್ರಾಣಿಗಳ ಜೀವ ಉಳಿಸುತ್ತಿರುವ ತೌಸಿಫ್ ಅಹಮದ್

ಇನ್ನು ಹೊಸ ಪ್ರಯತ್ನಕ್ಕೆ ಕೈಹಾಕಿದ ಯುಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯರು, ಪ್ರಾಣಿ ಪ್ರಿಯನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಉಪಾಯದಿಂದ ನಾಯಿಯ ಜೀವ ಹಾಗೂ ವಾಹನ ಸವಾರರ ಜೀವ ಉಳಿಯಲಿದೆ. ಜೊತೆಗೆ ಆಗುವ ಅನಾಹುತ ತಪ್ಪಿಸಿದಂತಾಗುತ್ತೆ ಎನ್ನುತ್ತಾರೆ ಸ್ಥಳೀಯರು.

ABOUT THE AUTHOR

...view details