ಕರ್ನಾಟಕ

karnataka

ETV Bharat / state

ಸಿಎಂ ಬಿಲ್ ರದ್ದು ಮಾಡಲು ಹೇಳಿದ್ರೆ, ಮೆಸ್ಕಾಂ 3 ತಿಂಗಳದ್ದು ಒಟ್ಟಿಗೆ ಕಟ್ಟಿ ಅಂತಿದೆ: ರಮಾನಾಥ ರೈ - B. Ramanath Rai news

ಮೆಸ್ಕಾಂ ವಿದ್ಯುತ್ ನೀತಿಗೆ ಮಾಜಿ ಸಚಿವ ರಮಾನಾಥ ರೈ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

B. Ramanath Rai
ಸಿಎಂ ರದ್ದು ಮಾಡಲು ಹೇಳಿದರೆ, ಮೆಸ್ಕಾಂ ಮೂರು ತಿಂಗಳ ಬಿಲ್ ಒಟ್ಟಿಗೆ ಕಟ್ಟಿ ಎನ್ನುತ್ತಾರೆ : ರೈ ಟೀಕೆ

By

Published : May 12, 2020, 5:21 PM IST

ಬಂಟ್ವಾಳ:ವಿದ್ಯುತ್ ಬಿಲ್ ಸಂಬಂಧಿಸಿ ಮೆಸ್ಕಾಂ ಅನುಸರಿಸುತ್ತಿರುವ ನೀತಿಗೆ ಮಾಜಿ ಸಚಿವ ಬಿ.ರಮಾನಾಥ ರೈ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಖಂಡಿಸಿದ್ದಾರೆ.

ಇದನ್ನು ತಕ್ಷಣ ರದ್ದುಗೊಳಿಸಿ, ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮ ಹೇಳಿಕೆಯಲ್ಲಿ ಒತ್ತಾಯಿಸಿರುವ ಅವರು, ಸರಿಪಡಿಸದೇ ಇದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಕೊರೊನಾ ವೈರಸ್​ನಿಂದ ತತ್ತರಿಸಿ ಲಾಕ್​ಡೌನ್ ಆದೇಶ ಜಾರಿಯಾದ ದಿನದಿಂದ ಸಾರ್ವಜನಿಕರು ತಮ್ಮ 2 ತಿಂಗಳ ಗೃಹ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ತಿಳಿಸಿದ್ದರು. ಆದರೆ ಮೆಸ್ಕಾಂ ಇಲಾಖೆಯವರು ಮನೆಗಳ ವಿದ್ಯುತ್ ಬಿಲ್‌ನಲ್ಲಿ 3 ತಿಂಗಳ ಬಿಲ್ಲನ್ನು ಒಟ್ಟಿಗೆ ಸೇರಿಸಿ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಗೃಹಬಳಕೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈ ಆಕ್ಷೇಪ ವ್ಯಕ್ತಪಡಿಸಿದರು.

ABOUT THE AUTHOR

...view details