ಪುತ್ತೂರು(ದಕ್ಷಿಣಕನ್ನಡ): ರಾಜ್ಯ ಸರ್ಕಾರ ಪ್ರಾಕೃತಿಕ ವಿಕೋಪದಲ್ಲಿ ಶೇ.33ರಷ್ಟು ಬೆಳೆ ನಾಶವಾದ್ರೆ ಮಾತ್ರ ರೈತರಿಗೆ ಪರಿಹಾರ ಎಂಬ ಆದೇಶ ಹೊರಡಿಸಿದೆ. ಈ ಆದೇಶವನ್ನ ಹಿಂದಕ್ಕೆ ಪಡೆದು ಕನಿಷ್ಠ ಬೆಳೆ ನಾಶವಾದ ರೈತರಿಗೂ ಪರಿಹಾರ ನೀಡಬೇಕು ಎಂದು ಪುತ್ತೂರು ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್ ಪಿ ಮುರಳೀಧರ್ ಒತ್ತಾಯಿಸಿದ್ದಾರೆ.
ಪುತ್ತೂರು : ಪ್ರಾಕೃತಿಕ ವಿಕೋಪದಲ್ಲಿ ಕನಿಷ್ಠ ಬೆಳೆ ನಾಶವಾದ ರೈತರಿಗೂ ಪರಿಹಾರ ನೀಡಿ - dakshinakannda news
ಲಾಕ್‌ಡೌನ್ ಸಮಯದಲ್ಲಿ ಘೋಷಿಸಿದ ಕಿಸಾನ್ ಸಮ್ಮಾನ್ ಯೋಜನೆಯ ಬಾಕಿ ಹಣವನ್ನ ರೈತರ ಖಾತೆಗೆ ಜಮೆ ಮಾಡಿಲ್ಲ. ಖಾಸಗಿ ವಿಮಾ ಕಂಪನಿಗಳ ಹಿಡಿತದಲ್ಲಿರುವ ಪ್ರಧಾನಮಂತ್ರಿ ಕಿಸಾನ್ ಭೀಮಾ ಯೋಜನೆಯ ಸೌಲಭ್ಯ ರೈತರಿಗೆ ಸಮಪರ್ಕವಾಗಿ ಸಿಗುತ್ತಿಲ್ಲ..
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಘೋಷಿಸಿರುವ ರೈತರ ಸಾಲಮನ್ನಾ ಯೋಜನೆಯ ಸೌಲಭ್ಯ ಇನ್ನೂ ಸಮರ್ಪಕವಾಗಿ ಎಲ್ಲಾ ರೈತರ ಕೈಸೇರಿಲ್ಲ. ಅಲ್ಲದೆ, ಲಾಕ್‌ಡೌನ್ ಸಮಯದಲ್ಲಿ ಘೋಷಿಸಿದ ಕಿಸಾನ್ ಸಮ್ಮಾನ್ ಯೋಜನೆಯ ಬಾಕಿ ಹಣವನ್ನ ರೈತರ ಖಾತೆಗೆ ಜಮೆ ಮಾಡಿಲ್ಲ. ಖಾಸಗಿ ವಿಮಾ ಕಂಪನಿಗಳ ಹಿಡಿತದಲ್ಲಿರುವ ಪ್ರಧಾನಮಂತ್ರಿ ಕಿಸಾನ್ ಭೀಮಾ ಯೋಜನೆಯ ಸೌಲಭ್ಯ ರೈತರಿಗೆ ಸಮಪರ್ಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಇನ್ನು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆ ರೈತ ವಿರೋಧಿಯಾಗಿದೆ. ಹೀಗಾಗಿ ಈ ಕಾಯ್ದೆ ತಿದ್ದುಪಡಿಯನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.