ಕರ್ನಾಟಕ

karnataka

ETV Bharat / state

ಪುತ್ತೂರು ನಗರಸಭೆ ತೆರಿಗೆಯಲ್ಲಿ ಶೇ. 8ರಷ್ಟು ಕಡಿಮೆಗೊಳಿಸುವುದಾಗಿ ಸಚಿವರ ಭರವಸೆ - Puttur Civil Engineers Association

ನಗರಸಭೆಯ ಈ ಸಾಲಿನ ತೆರಿಗೆ ಪ್ರಮಾಣದಲ್ಲಿ ಶೇ. 8ರಷ್ಟು ಇಳಿಕೆ ಮಾಡಬೇಕೆಂಬ ಮನವಿಯನ್ನು ಪರಿಗಣಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ ಎಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್​ ಅಧ್ಯಕ್ಷ ಕೆ.ಹರೀಶ್​ ಪುತ್ತೂರಾಯ ತಿಳಿಸಿದ್ದಾರೆ.

Puttur Civil Engineers Association President K. Harisa Putturaya,
ಪುತ್ತೂರು ನಗರಸಭೆ ತೆರಿಗೆಯಲ್ಲಿ ಶೇ. 8ರಷ್ಟು ಕಡಿಮೆಗೊಳಿಸುವುದಾಗಿ ಸಚಿವರ ಭರವಸೆ

By

Published : Jun 10, 2020, 9:54 PM IST

Updated : Jun 10, 2020, 10:05 PM IST

ದಕ್ಷಿಣಕನ್ನಡ:ನಗರಸಭೆಯ ಈ ಸಾಲಿನ ತೆರಿಗೆ ಪ್ರಮಾಣದಲ್ಲಿ ಶೇ. 8ರಷ್ಟು ಇಳಿಕೆ ಮಾಡಬೇಕೆಂಬ ಮನವಿಯನ್ನು ಸಾಕಾರಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ ಎಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್​ ಅಧ್ಯಕ್ಷ ಕೆ.ಹರೀಶ್​ ಪುತ್ತೂರಾಯ ತಿಳಿಸಿದ್ದಾರೆ.

ಪುತ್ತೂರು ನಗರಸಭೆ ತೆರಿಗೆಯಲ್ಲಿ ಶೇ. 8ರಷ್ಟು ಕಡಿಮೆಗೊಳಿಸುವುದಾಗಿ ಸಚಿವರ ಭರವಸೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸೋಮವಾರ ನಗರಸಭೆ, ಪಟ್ಟಣ ಪಂಚಾಯಿತಿ, ಮಹಾನಗರಪಾಲಿಕೆಗಳ ಕುರಿತಂತೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಚಿವರು ಈ ಭರವಸೆಯನ್ನ ನೀಡಿದ್ದಾರೆ ಎಂದರು.

ಪುತ್ತೂರು ನಗರಸಭೆಯಲ್ಲಿ ಮಾತ್ರ ಜಾರಿಯಲ್ಲಿರುವ ಖಾತಾ ಪ್ರತಿ ನೀಡುವ ಸಂದರ್ಭದಲ್ಲಿ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸುವ ನಿಯಮವನ್ನು ಕೈಬಿಟ್ಟು, ಖಾತಾ ಪ್ರತಿ ನೀಡಲು ಶುಲ್ಕ ರದ್ದು ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.

ಪುತ್ತೂರು ನಗರಸಭೆಯಲ್ಲಿ 2020-21ನೇ ಸಾಲಿನ ತೆರಿಗೆಯನ್ನ ಶೇ. 23ರಷ್ಟು ಹೆಚ್ಚಳಗೊಳಿಸಿ ಆಡಳಿತಾಧಿಕಾರಿಯವರು ಆದೇಶ ಮಾಡಿದ್ದರು. ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು.

Last Updated : Jun 10, 2020, 10:05 PM IST

ABOUT THE AUTHOR

...view details