ಪುತ್ತೂರು : ಖಾಸಗಿ ಆಂಬ್ಯುಲೆನ್ಸ್ಗಳು ಕಾನೂನು ಮೀರಿ ಗ್ಲಾಸ್ಗಳಿಗೆ ಟಿಂಟ್ ಅಳವಡಿಸಿ ಓಡಾಡುತ್ತಿವೆ ಎಂಬ ಈಟಿವಿ ಭಾರತ ವರದಿ ಹಿನ್ನೆಲೆ ಇದೀಗ ಪೊಲೀಸ್ ಇಲಾಖೆ ಅಕ್ರಮವಾಗಿ ಟಿಂಟ್ ಅಳವಡಿಸಿದ ಆಂಬ್ಯುಲೆನ್ಸ್ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಈಟಿವಿ ಭಾರತ ವರದಿಗೆ ಸ್ಪಂದಿಸಿದ ಪುತ್ತೂರು ನಗರ ಪೊಲೀಸರು! ಅಕ್ರಮ ಚಟುವಟಿಕೆಗಳಿಗೆ ಕತ್ತರಿ
ಪುತ್ತೂರಿನಲ್ಲಿ ಕೆಲವು ಖಾಸಗಿ ಆಂಬ್ಯುಲೆನ್ಸ್ಗಳು ಕಾನೂನು ಮೀರಿ ಟಿಂಟ್ ಅಳವಡಿಸಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚತ್ತ ಪೊಲೀಸರು ಅವುಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಪುತ್ತೂರಿನ ಕೆಲವು ಆಂಬ್ಯುಲೆನ್ಸ್ಗಳು ಈ ರೀತಿ ಅಕ್ರಮವಾಗಿ ಟಿಂಟ್ ಅಳವಡಿಸಿ ಕಾರ್ಯಾಚರಣೆ ನಡೆಸುತ್ತಿರುವ ಹಾಗೂ ಈ ಮೂಲಕ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿವೆ ಎಂಬ ಆರೋಪದ ಹಿನ್ನೆಲೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.
ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತ ಪುತ್ತೂರು ನಗರ ಪೊಲೀಸರು ಟಿಂಟ್ ಅಳವಡಿಸಿರುವ ಎಲ್ಲಾ ಆಂಬ್ಯುಲೆನ್ಸ್ಗಳು ತಕ್ಷಣವೇ ಅವುಗಳನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗೆ ಕರೆಸಿ ಅಲ್ಲೇ ಕೆಲವು ಆಂಬ್ಯುಲೆನ್ಸ್ಗಳ ಟಿಂಟ್ಗಳನ್ನು ತೆರವುಗೊಳಿಸಿದ್ದಾರೆ. ಜೊತೆಗೆ ದಂಡವನ್ನು ಸಹ ಹಾಕಿದ್ದಾರೆ.