ಕರ್ನಾಟಕ

karnataka

ETV Bharat / state

ಕಡಬದಲ್ಲಿ ತೀವ್ರ ವಿದ್ಯುತ್ ಸಮಸ್ಯೆ....ಪ್ರತಿಭಟನೆಗೆ ತಯಾರಿ

ಕಡಬ ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹರಿಸದಿದ್ದಲ್ಲಿ ಫೆಬ್ರವರಿ 20 ರಂದು ಕಡಬ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಲಾಗಿದೆ.

power cut  problem in kadaba
ವಿದ್ಯುತ್ ಸಮಸ್ಯೆ

By

Published : Feb 17, 2020, 5:44 PM IST

ದಕ್ಷಿಣ ಕನ್ನಡ:ಕಡಬ ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹರಿಸದಿದ್ದಲ್ಲಿ ಫೆಬ್ರವರಿ 20 ರಂದು ಕಡಬ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಕಡಬ ತಾಲೂಕು ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬರು ಎಚ್ಚರಿಕೆ ನೀಡಿದರು.

ಕಡಬದ ಪ್ರೆಸ್​​ಕ್ಲಬ್​​​ನಲ್ಲಿ ಕಾಂಗ್ರೆಸ್, ಜೆಡಿಎಸ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ರೈತ ಸಂಘ,ವರ್ತಕರು ಸಂಘಗಳ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ 2 ವರ್ಷದಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಬಗ್ಗೆ ವಿದ್ಯುತ್ ಬಳಕೆದಾರರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಆದರೂ ಇಲ್ಲಿ ಇನ್ನು ವಿದ್ಯುತ್ ಸಮಸ್ಯೆ ನೀಗಿಲ್ಲ ,ರೈತರ ಪಂಪ್​​​ಸೆಟ್ ಗಳಿಗೆ ವಾರದಲ್ಲಿ 3 ದಿನ ಕರೆಂಟ್ ಕೊಟ್ಟರೂ ಲೋ ವೋಲ್ಟೇಜ್ ಸಮಸ್ಯೆಯಿಂದ ಪಂಪ್​​​ಗಳು ಚಾಲನೆ ಆಗ್ತಾ ಇಲ್ಲ ಅರ್ಧ ಗಂಟೆಗೊಮ್ಮೆ ವಿದ್ಯುತ್ ಹೋಗಿ ಬರುತ್ತಿರುವುದರಿಂದ ಮೋಟಾರ್​​ಗಳು ಸುಟ್ಟು ಭಸ್ಮವಾಗುತ್ತಿದೆ ಎಂದು ರೈತರ ಸಮಸ್ಯೆಗಳನ್ನು ವಿವರಿಸಿದ್ರು.

ವಿದ್ಯುತ್ ಸಮಸ್ಯೆ

ಗ್ರಾಮಪಂಚಾಯತ್​​ಗಳ ಮೂಲಕ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ವಿದ್ಯುತ್ ಸಮಸ್ಯೆಯಿಂದ ಜನ ಕುಡಿಯುವ ನೀರಿಗೂ ಕಷ್ಟ ಪಡುವಂತಾಗಿದೆ. ಸರ್ಕಾರಿ ದಾಖಲಾತಿಗಳನ್ನು ಪಡೆಯಲು ಜನ ವಿವಿಧ ಕಚೇರಿಗಳಲ್ಲಿ ಸಾಲುಗಟ್ಟಿ ವಾರಗಟ್ಟಲೇ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ, ಫೋನ್ ಕರೆ, ಇಂಟರ್ನೆಟ್ ಕೂಡ ವಿದ್ಯುತ್ ಸಮಸ್ಯೆಯಿಂದ ಇಲ್ಲದಂತಾಗಿದೆ, ಮಕ್ಕಳಿಗೂ ಪರೀಕ್ಷಾ ಸಮಯ ಅದನ್ನೂ ಮೆಸ್ಕಾಂ ಗಮನಿಸುತ್ತಿಲ್ಲ ಎಂದು ಅವರು ಹೇಳಿದರು. ಈ ಎಲ್ಲಾ ಘಟನೆಗಳಿಂದ ಬೆಸೆತ ಸಾರ್ವಜನಿಕರನ್ನು, ಸಂಘಸಂಸ್ಥೆಗಳನ್ನು ಒಗ್ಗೂಡಿಸಿ ಇದೇ ತಿಂಗಳು 20ರಂದು ಕಡಬದ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.ಈ ವೇಳೆ ಕಡಬ ಬ್ಲಾಕ್ ಕಾಂಗ್ರೆಸ್, ಜಾತ್ಯತೀತ ಜನತಾದಳ,ರೈತ ಸಂಘ ಹಾಗೂ ಮತ್ತಿತರ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

ABOUT THE AUTHOR

...view details