ಮಂಗಳೂರು:ಪಡಿತರ ಅಕ್ಕಿಯನ್ನು ಜನರಿಂದ ಸಂಗ್ರಹಿಸಿ ಅದನ್ನು ಕೇರಳಕ್ಕೆ ಸಾಗಿಸಲು ಯತ್ನಿಸಿರುವುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಲಾಗಿದೆ. ಗೂಡಿನಬಳಿ ನಿವಾಸಿಗಳಾದ ಅಬ್ದುಲ್ ಹಕೀಂ (60) ಮತ್ತು ಅಬ್ದುಲ್ ಸಲಾಂ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಕೇರಳಕ್ಕೆ ಅನ್ನ ಭಾಗ್ಯ ಅಕ್ಕಿ ಸಾಗಾಟ ಯತ್ನ: ಇಬ್ಬರ ಬಂಧನ
ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ಬೆಲೆಗೆ ಅಕ್ಕಿಯನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಗೂಡಿನಬಳಿ ನಿವಾಸಿ ಬಂಧಿತ ಅಬ್ದುಲ್ ಹಕೀಂ ವಾಹನವೊಂದರಲ್ಲಿ ಅಕ್ಕಿ ಮೂಟೆಗಳನ್ನು ತುಂಬಿಸಿ ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಯಾವುದೇ ದಾಖಲಾತಿಗಳಿಲ್ಲದೇ ಅಕ್ಕಿಯನ್ನು ಕೇರಳಕ್ಕೆ ಸಾಗಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದ.
ಜನರಿಂದ ಕಡಿಮೆ ಬೆಲೆಗೆ ಅಕ್ಕಿಯನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೇರಳಕ್ಕೆ ಕೊಂಡೊಯ್ಯಲು ಯತ್ನಿಸಿದ್ದು ವಾಹನದಲ್ಲಿದ್ದ 50 ಕೆಜಿ ತೂಕದ 60 ಚೀಲಗಳು ಹಾಗೂ ಅಂಗಡಿಯಲ್ಲಿದ್ದ ತಲಾ 50 ಕೆಜಿಯ 27 ಬ್ಯಾಗ್ಗಳು, 40 ಕೆಜಿ ತೂಕದ 28 ಚೀಲಗಳು, ತೂಗು ಯಂತ್ರ, 2 ಹೊಲಿಗೆ ಯಂತ್ರ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.