ಕರ್ನಾಟಕ

karnataka

ETV Bharat / state

ಎಣ್ಣೆ ಸಿಗಲ್ಲ ಅಂತ ಹೀಗಾ ಮಾಡೋದು... ಮನೆಯಲ್ಲೇ ಗೇರು ಹಣ್ಣಿನ ಕಳ್ಳಭಟ್ಟಿ ತಯಾರಿಕೆಗೆ ಮುಂದಾದಾತ ಸೆರೆ - ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ

ಮನೆಯಲ್ಲೇ ಗೇರು ಹಣ್ಣಿನ ಕಳ್ಳಬಟ್ಟಿ ತಯಾರಿಕೆಗೆ ಮುಂದಾದ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನಿಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಗೇರು ಹಣ್ಣಿನ ರಸ, ಗೇರುಹಣ್ಣಿನ ಸಾರಾಯಿ ಮತ್ತು ಸಾರಾಯಿ ತಯಾರು ಮಾಡಲು ಬಳಸುವ ಪಾತ್ರೆಗಳನ್ನು ವಶ ಪಡಿಸಿಕೊಂಡಿದ್ದಾರೆ.

illegal

By

Published : Apr 4, 2020, 8:36 AM IST

ಸುಳ್ಯ(ದಕ್ಷಿಣ ಕನ್ನಡ): ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿಗಳಿಗೂ ಬೀಗ ಬಿದ್ದಿದೆ. ಆದರೂ ಹಲವು ಕಡೆಗಳಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ ವ್ಯಾಪಾರಗಳ ಬಗ್ಗೆ ಸುದ್ದಿಗಳು ಕೇಳಿಬರುತ್ತಿದೆ.

ಈ ನಡುವೆ ಗೇರು ಹಣ್ಣಿನ ಸಾರಾಯಿ ತಯಾರಿಕೆಗೆ ಮುಂದಾದ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ಳಾರೆ ಕಲ್ಲೋಣಿಯ ಜನಾರ್ದನ ಎಂಬುವವರು ತಮ್ಮ ಮನೆಯಲ್ಲಿ ಗೇರುಹಣ್ಣಿನ ಕಳ್ಳಭಟ್ಟಿ ತಯಾರಿಸಲು ಮುಂದಾದ ವ್ಯಕ್ತಿ. ಈತನಿಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಗೇರು ಹಣ್ಣಿನ ರಸ, ಗೇರುಹಣ್ಣಿನ ಸಾರಾಯಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾರಾಯಿ ತಯಾರು ಮಾಡಲು ಬಳಸುವ ಪಾತ್ರೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ, ಸುಳ್ಯದ ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ರಾಧಾ ಎಸ್.ಪಿ. ನೇತೃತ್ವದ ತಂಡವು ಈ ದಾಳಿ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details