ಬಂಟ್ವಾಳ(ದಕ್ಷಿಣಕನ್ನಡ): ಇಂಟರ್ನೆಟ್ ಕೇಬಲ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.
ಇಂಟರ್ನೆಟ್ ಕೇಬಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಂಟರ್ನೆಟ್ ಕೇಬಲ್ ಕದ್ದಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.
ಇಂಟರ್ನೆಟ್ ಕೇಬಲ್ ಕಳವು: ಇಬ್ಬರು ಆರೋಪಿಗಳ ಬಂಧನ
ಪರಂಗಿಪೇಟೆ ನಿವಾಸಿಗಳಾದ ಹರೀಶ್ ಮತ್ತು ಯೋಗೀಶ್ ಬಂಧಿತ ಆರೋಪಿಗಳು. ಇವರು ಮೇ 23ರಂದು ತಾಲೂಕಿನ ನೆತ್ತರಕೆರೆಯಿಂದ ಕೊಡ್ಮಾನ್ವರೆಗಿನ 3,000 ಮೀಟರ್ ಉದ್ದದ ಕೇಬಲ್ಅನ್ನ ಕಳ್ಳತನ ಮಾಡಿರುವುದಾಗಿ ದೂರು ದಾಖಲಾಗಿತ್ತು.
ಈ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತರಿಂದ 31 ಸಾವಿರ ರೂಪಾಯಿ ಮೌಲ್ಯದ ಕೇಬಲ್ ವಶಕ್ಕೆ ಪಡೆಯಲಾಗಿದೆ.