ಕರ್ನಾಟಕ

karnataka

ETV Bharat / state

ನಂದಿನಿ ಉತ್ಸವದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್‌ ಗಂಗಾರತಿಗಾಗಿ ಏರಿದ ವೇದಿಕೆ ಕುಸಿತ - ಸಿಪಿ ಯೋಗೇಶ್ವರ್ ಇದ್ದ ವೇದಿಕೆ ಕುಸಿತ

ಜಿಲ್ಲೆಯ ಸಸಿಹಿಟ್ಲು ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ತಿಳಿಸಿದರು.

ಸಿ.ಪಿ.ಯೋಗೇಶ್ವರ್‌ ಗಂಗಾರತಿಗಾಗಿ ಏರಿದ ವೇದಿಕೆ ಕುಸಿತ
ಸಿ.ಪಿ.ಯೋಗೇಶ್ವರ್‌ ಗಂಗಾರತಿಗಾಗಿ ಏರಿದ ವೇದಿಕೆ ಕುಸಿತ

By

Published : Mar 21, 2021, 3:22 AM IST

ಮಂಗಳೂರು: ನಗರದ ಸಸಿಹಿತ್ಲುವಿನಲ್ಲಿ‌ ನಡೆದ ನಂದಿನಿ ಉತ್ಸವ ಕಾರ್ಯಕ್ರಮದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಸಹಿತ ಎಲ್ಲಾ ಅತಿಥಿಗಳು ಗಂಗಾರತಿ ಮಾಡಲು ವೇದಿಕೆ ಏರಿದಾಗ ಜಗ್ಗಿದ ಘಟನೆ ನಡೆದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ಎಲ್ಲರೂ ಕೆಳಗೆ ನಿಂತು ಗಂಗಾರತಿ ಮಾಡಿದ ಘಟನೆ ನಡೆದಿದೆ.

ನಗರದ ಸಸಿಹಿತ್ಲು ಪ್ರದೇಶದಲ್ಲಿ ಆಯೋಜಿಸಲಾಗಿರುವ ನಂದಿನಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಪಿ.ಯೋಗೀಶ್ವರ್, ನಮ್ಮ ರಾಜ್ಯಗಳಲ್ಲಿ ಹೆಲಿ ಟೂರಿಸಂ ಆರಂಭಗೊಂಡಿದ್ದು, ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಲಿ ಟೂರಿಸಂ ಜೊತೆಗೆ ಸೀ ಪ್ಲೇನ್ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಮಾಡಲಾಗುತ್ತದೆ.‌ ದ.ಕ.ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು, ಆದಷ್ಟು ಬೇಗ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳನ್ನು ಹುದ್ದೆಗೆ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು.

ನಂದಿನಿ ಉತ್ಸವದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಭಾಗಿ

ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರವಾಸೊದ್ಯಮದಲ್ಲಿ ಪ್ರಚಾರ ಮಾಡಬೇಕಾಗಿದ್ದು, ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿರುವ ಪಡುಬಿದ್ರೆ ಹಾಗೂ ಕಾಸರಗೋಡು ಕಡಲ ತೀರಗಳ ಮಾದರಿಯಲ್ಲಿ ತಲಪಾಡಿ, ಪಣಂಬೂರು, ಚಿತ್ರಾಪುರ, ಸುರತ್ಕಲ್, ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ ಬೀಚ್​ಗಳಿಗೆ ಸಂಪರ್ಕ ರಸ್ತೆಗಳು, ಶೌಚಾಲಯಗಳು, ಹೈಮಾಸ್ಕ್ ದೀಪಗಳು ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಸಸಿಹಿಟ್ಲು ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಗಡೆ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details