ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಪೆರುವಾಯಿ ಗ್ರಾಮ ಪಂಚಾಯತ್ 8 ಸದಸ್ಯರಿರುವ ಸಣ್ಣ ಪಂಚಾಯತ್. ಉಪಾಧ್ಯಕ್ಷೆ ನೆಫಿಸಾ ತಸ್ಲಿ (29) ಅವರು ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಪ್ರೇರಣೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ವಾಹಿನಿಗೆ ಚಾಲನೆ ನೀಡಿದ್ದೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 600 ಮನೆಗಳಿದ್ದು, ಪ್ರತಿ ಮನೆಯಿಂದ ವಾರಕ್ಕೆ ಎರಡು ಬಾರಿಯಾದರೂ ತ್ಯಾಜ್ಯ ಸಂಗ್ರಹವಾಗುವಂತೆ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ನಾಲ್ಕು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ವಾಹನ ಬಂದಿತ್ತು. ಗ್ರಾಮದ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮಹಿಳಾ ಚಾಲಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು.