ಕರ್ನಾಟಕ

karnataka

ETV Bharat / state

ಕುಕ್ಕೆ ಸಿಬ್ಬಂದಿಯ ಉದ್ಯೋಗವನ್ನ ಖಾಯಂಗೊಳಿಸಿದ ಸಿಎಂಗೆ ಕಟೀಲ್​ ಕೃತಜ್ಞತೆ

ದೇಗುಲಗಳಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗೆ ಜೀವನ ನಡೆಸಲು ಯಾವುದೇ ಅನ್ಯ ದಾರಿ ಇರುವುದಿಲ್ಲ. ಯಾವುದೇ ಸೌಲಭ್ಯಗಳಿರುವುದಿಲ್ಲ. ಇದನ್ನೆಲ್ಲ ಮನಗಂಡು ಸಿಎಂ ಬೊಮ್ಮಾಯಿ ಸರ್ಕಾರ ವ್ಯವಸ್ಥೆ ಮಾಡಿದೆ. ಹಾಗಾಗಿ, ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ..

MP Nalin Kumar Kateel
ಸಂಸದ ಕಟೀಲ್​

By

Published : Oct 17, 2021, 4:14 PM IST

ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ತಾತ್ಕಾಲಿಕ ಸಿಬ್ಬಂದಿಯನ್ನು ಖಾಯಂಗೊಳಿಸಿರುವುದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್​ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ದೇಗುಲ ಸಿಬ್ಬಂದಿಗೆ ಖಾಯಂಮಾತಿ ಪತ್ರ ವಿತರಣಾ ಕಾರ್ಯಕ್ರಮ

ನಗರದ ವಲ್ಲೀಶ ಸಭಾ ಭವನದಲ್ಲಿ ದೇವಸ್ಥಾನದ ಸ್ವಚ್ಛಮಂದಿರ ಸೇವಾ ಅಭಿಯಾನ ಹಾಗೂ ದೇಗುಲ ಸಿಬ್ಬಂದಿಗೆ ಕೆಲಸ ಖಾಯಂಮಾತಿ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಸಚಿವ ಎಸ್.ಅಂಗಾರ ಮತ್ತು ಸಂಸದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರಲ್ಲದೇ, ಖಾಯಂಮಾತಿ ಪತ್ರಗಳನ್ನು ಸಿಬ್ಬಂದಿಗೆ ವಿತರಿಸಿದರು.

ಬಳಿಕ ಮಾತನಾಡಿದ ಸಂಸದ ಕಟೀಲ್​, ದೇಗುಲಗಳಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗೆ ಜೀವನ ನಡೆಸಲು ಯಾವುದೇ ಅನ್ಯ ದಾರಿ ಇರುವುದಿಲ್ಲ. ಯಾವುದೇ ಸೌಲಭ್ಯಗಳಿರುವುದಿಲ್ಲ. ಇದನ್ನೆಲ್ಲ ಮಗಂಡು ಸಿಎಂ ಬೊಮ್ಮಾಯಿ ಸರ್ಕಾರ ವ್ಯವಸ್ಥೆ ಮಾಡಿದೆ. ಹಾಗಾಗಿ, ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಜಲಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ ಸುಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ABOUT THE AUTHOR

...view details