ಮಂಗಳೂರು :ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದ್ದು, ಸಿಹಿ-ಕಹಿ ನೆನಪುಗಳೊಂದಿಗೆ 2019ನೇ ವರ್ಷಕ್ಕೆ ವಿದಾಯ ಹೇಳಿದ ಜನತೆ 2020ರ ಹೊಸ ವರ್ಷವನ್ನು ಬಹಳ ಸಡಗರದಿಂದ ಬರ ಮಾಡಿಕೊಂಡರು.
ನೂತನ ವರ್ಷವನ್ನು ಅದ್ಧೂರಿಯಾಗಿ ಬರ ಮಾಡಿಕೊಂಡ ಕರಾವಳಿ ಜನತೆ - ಹೊಸ ವರ್ಷದ ಸಂಭ್ರಮ
ಎಲ್ಲೆಲ್ಲೋ ಹೊಸ ವರ್ಷಾಚರಣೆಯ ಸಂಭ್ರಮ, ಸಡಗರ ಜೋರಾಗಿದ್ದು, ನಗರದಲ್ಲೂ ನೂತನ ವರ್ಷವನ್ನು ಜನತೆ ಅದ್ದೂರಿಯಾಗಿ ಬರ ಮಾಡಿಕೊಂಡರು.
ನಗರದ ಹೊಟೇಲ್ಗಳು, ಕ್ಲಬ್ಗಳು, ಮಾಲ್ಗಳಲ್ಲಿ ನೂತನ ವರ್ಷಾಚರಣೆ ಬಹಳ ಜೋರಾಗಿತ್ತು. ಯುವ ಸಮೂಹ ಬಹಳ ಉತ್ಸಾಹದಿಂದ ಮೋಜು, ಮಸ್ತಿಯಲ್ಲಿ ತೊಡಗಿದ್ದು, ಡಿಜೆ ಸಂಗೀತದ ಲಯಕ್ಕೆ ಕುಣಿದು ಕುಪ್ಪಳಿಸಿದರು. 12 ಗಂಟೆಯಾಗುತ್ತಿದ್ದಂತೆ ಎಲ್ಲೆಲ್ಲೂ ಸಂಭ್ರಮ ಮುಗಿಲು ಮುಟ್ಟಿದ್ದು, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.
ವರ್ಷಾಚರಣೆಯ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು. ನಗರಾದ್ಯಂತ ಯಾವುದೇ ಸಂಭ್ರಮಾಚರಣೆಯನ್ನು ಕಡ್ಡಾಯವಾಗಿ 12.05ಕ್ಕೆ ಮುಗಿಸಬೇಕು. ಕಾನೂನು ಕ್ರಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದ್ದರು.