ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ರಿಕ್ಷಾ ಚಾಲಕರಿಗೆ ಮೀಟರ್​​ ದರಕ್ಕಿಂತ ಹೆಚ್ಚು ಹಣ ನೀಡಬೇಕು: ಆರ್​ಟಿಒ - ಮಂಗಳೂರು ಆರ್​ಟಿಒ

ರಿಕ್ಷಾ ಪ್ರಯಾಣಿಕರು ಮೀಟರ್​​ನಲ್ಲಿ ಬರುವ ದರಕ್ಕಿಂತ ಹೆಚ್ಚು ಹಣವನ್ನು ರಿಕ್ಷಾ ಚಾಲಕರಿಗೆ ನೀಡಬೇಕು. ಮಂಗಳೂರಲ್ಲಿ ಇದು ಕಾನೂನು ಬಾಹಿರ ಅಲ್ಲ. ಹೀಗೆ ಹಣ ನೀಡಿ ಎಂದು ಆರ್​ಟಿಒ ಪ್ರಕಟಣೆಯಲ್ಲಿ ತಿಳಿಸಿದೆ.

Passengers should pay rickshaw drivers more than the meter rate: RTO
ರಿಕ್ಷಾ ಚಾಲಕರಿಗೆ ಮೀಟರ್ ದರಕ್ಕಿಂತ ಹೆಚ್ಚು ಹಣ ನೀಡಬೇಕು : ಆರ್ ಟಿ ಓ

By

Published : May 13, 2020, 9:31 PM IST

ಮಂಗಳೂರು: ನಗರದಲ್ಲಿ ಇನ್ನು ಮುಂದೆ ರಿಕ್ಷಾ ಪ್ರಯಾಣಿಕರು ಮೀಟರ್​​ನಲ್ಲಿ ಬರುವ ದರಕ್ಕಿಂತ ಹೆಚ್ಚು ಹಣವನ್ನು ರಿಕ್ಷಾ ಚಾಲಕರಿಗೆ ನೀಡಬೇಕು. ಮಂಗಳೂರಲ್ಲಿ ಇದು ಕಾನೂನು ಬಾಹಿರ ಅಲ್ಲ. ಹೀಗೆ ಹಣ ನೀಡಿ ಎಂದು ಆರ್​ಟಿಒ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಬ್ರವರಿ 27ಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಒಂದೂವರೆ ಕಿಲೋ ಮೀಟರ್ ಕನಿಷ್ಠ ದರವನ್ನು ಈಗ ಇರುವ 25 ರೂಪಾಯಿಯಿಂದ ಮೂವತ್ತು ರೂಪಾಯಿಗೆ ಏರಿಸಲಾಗಿತ್ತು. ಬಳಿಕ ಪ್ರತಿ ಕಿಲೋ ಮೀಟರಿಗೆ ಇದ್ದ 13 ರೂ.ಗಳನ್ನು 15ಕ್ಕೆ ಏರಿಸಲಾಗಿತ್ತು.

ಆದರೆ ಲಾಕ್​ಡೌನ್​​ ನಿಮಿತ್ತ ಬಾಡಿಗೆ ಏರಿಕೆ ಆಗಿರಲಿಲ್ಲ. ಇದೀಗ ಈ ದರವನ್ನು ಪಡೆಯುವಂತೆ ರಿಕ್ಷಾ ಚಾಲಕರಿಗೆ ಆರ್​​ಟಿಒ ಸೂಚನೆ ನೀಡಿದೆ. ಆದರೆ ಮೀಟರ್​​ನಲ್ಲಿ ಬದಲಾವಣೆ ಮಾಡಲು ತಾಂತ್ರಿಕ ಡೀಲರ್​ಗಳು ಲಭ್ಯವಿಲ್ಲದ ಕಾರಣ ಹಳ್ಳಿ ಮೀಟರ್​​ನಲ್ಲಿ ಬರುವ ದರಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕರು ನೀಡಬೇಕಾಗಿದೆ. ಈ ಪ್ರಕಾರ ಪ್ರಯಾಣ ದರ ನೀಡಿ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details