ಕರ್ನಾಟಕ

karnataka

ETV Bharat / state

ಮತ್ತೊಂದು ಪಾಸಿಟಿವ್​ ಪ್ರಕರಣಕ್ಕೆ ಸಾಕ್ಷಿಯಾದ ಫಸ್ಟ್​ ನ್ಯೂರೋ : ಪಿಲಾರು ಸೀಲ್​ಡೌನ್​

ಯುವತಿಯೊಬ್ಬರನ್ನು ಏ.12 ರಂದು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಂಟ್ವಾಳದ ಮಹಿಳೆಯಿದ್ದ ವಾರ್ಡ್​ನಲ್ಲೇ ಯುವತಿಯನ್ನು ದಾಖಲಿಸಲಾಗಿತ್ತು. ಇದೇ ವೇಳೆ, ಆಕೆಯ ತಾಯಿ ಕೂಡ ಜೊತೆಗಿದ್ದರು. ಇದರಿಂದ ಸೋಂಕು ತಗುಲಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

one more positive case
ಪಿಲಾರು ಸೀಲ್​ಡೌನ್​

By

Published : May 13, 2020, 7:42 PM IST

ಮಂಗಳೂರು : ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವತಿಯೊಬ್ಬಳ ತಾಯಿಗೆ ಕೊರೊನಾ ಸೋಂಕು ದೃಢವಾಗಿರುವುದರಿಂದ ಪಿಲಾರು ಸುತ್ತಮುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಕಂಟೇನ್​​​​​​ಮೆಂಟ್​ ಝೋನ್​, ಹಾಗೂ 5 ಕಿ.ಮಿ ವ್ಯಾಪ್ತಿ ಪ್ರದೇಶವನ್ನು ಸೀಲ್​ಡೌನ್​ ಎಂದು ಘೋಷಣೆ ಮಾಡಲಾಗಿದೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಯುವತಿಯನ್ನು ಏ.12 ರಂದು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಂಟ್ವಾಳದ ಮಹಿಳೆಯಿದ್ದ ವಾರ್ಡ್​ನಲ್ಲೇ ಯುವತಿಯನ್ನು ದಾಖಲಿಸಲಾಗಿತ್ತು. ಇದೇ ವೇಳೆ, ಆಕೆಯ ತಾಯಿ ಕೂಡ ಜೊತೆಗಿದ್ದರು. ಇದರಿಂದ ಸೋಂಕು ತಗಲಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಫಸ್ಟ್ ನ್ಯೂರೋದಲ್ಲಿ ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಿಕಿತ್ಸೆ ಪಡೆದಿದ್ದ ಯುವತಿಯನ್ನು ಕೊರೊನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಆದರೆ, ಆಕೆಗೆ ನೆಗೆಟಿವ್​ ಬಂದಿತ್ತು. ಆದರೀಗ ಆಕೆಯ ತಾಯಿಗೆ ಪಾಸಿಟಿವ್​ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

32 ಗಂಟೆ ಮಾತ್ರ ಆಸ್ಪತ್ರೆಯಲ್ಲಿದ್ದ ತಾಯಿ-ಮಗಳು :

ಯುವತಿಯ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕೆಂದು ಆರ್ಥಿಕವಾಗಿ ಹಿಂದುಳಿದ ತಾಯಿ, ಆಕೆಯನ್ನು ಬೇರೆ ಆಸ್ಪತ್ರೆಗೆ ಕೊಂಡೊಯ್ಯುವ ಉದ್ದೇಶದಿಂದ ಎರಡೇ ದಿನದಲ್ಲಿ ಡಿಸ್ಚಾರ್ಜ್​ ಮಾಡಿಸಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ನೇರ ಮನೆಗೆ ಹೋಗಿದ್ದರು.

ABOUT THE AUTHOR

...view details