ಪುತ್ತೂರು: ರಿಕ್ಷಾ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕನೋರ್ವ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಿಕ್ಷಾ ಅಪಘಾತ: ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಸಾವು - Auto Road accident news
ಪುತ್ತೂರಿನ ಕೆಯ್ಯೂರು-ದೇವಿನಗರ ಕಣಿಯಾರು ರಸ್ತೆಯಲ್ಲಿ ರಿಕ್ಷಾ ಪಲ್ಟಿಯಾಗಿ ಅದರಲ್ಲಿದ್ದ ಪ್ರಯಾಣಿಕನೋರ್ವ ಸಾವನ್ನಪ್ಪಿದ್ದಾರೆ.
Died
ಕೆಯ್ಯೂರು-ದೇವಿನಗರ ಕಣಿಯಾರು ರಸ್ತೆಯಲ್ಲಿ ರಿಕ್ಷಾ ಪಲ್ಟಿಯಾಗಿ ಅದರಲ್ಲಿದ್ದ ತ್ಯಾಗರಾಜ ನಗರದ ಉಮೇಶ್ ಹಾಗೂ ರಿಕ್ಷಾ ಚಾಲಕ ಸತೀಶ್ ಅವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಇವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಉಮೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಮೃತ ಉಮೇಶ್ ಪುತ್ತೂರು ತಾಲೂಕು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷರಾಗಿದ್ದರು.