ಮಂಗಳೂರು: ಇಂದು ಬೀಸಿದ ಚಂಡಮಾರುತದ ಹೊಡೆತಕ್ಕೆ ಎರಡು ಬೋಟ್ಗಳು ಮಂಗಳೂರಿನ ಆಳ ಸಮುದ್ರದಲ್ಲಿ ಸಿಲುಕಿಹಾಕಿಕೊಂಡಿವೆ ಎನ್ನಲಾಗುತ್ತಿದೆ. ಒಂದು ಬೋಟ್ನಲ್ಲಿದ್ದ 5 ಮಂದಿ ನಾಪತ್ತೆಯಾಗಿದ್ದು 9 ಮಂದಿಯಿರುವ ಮತ್ತೊಂದು ಬೋಟ್ ಅಪಾಯಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ.
ನವಮಂಗಳೂರು ಬಂದರಿನಿಂದ ಹೊರಟಿದ್ದ ಎಂಆರ್ಪಿಎಲ್ಗೆ ಸಂಬಂಧಿಸಿದ ತೇಲು ಜೆಟ್ಟಿ ನಿರ್ವಹಣೆ ಮಾಡುವ ಬೋಟ್ ಚಂಡಮಾರುತಕ್ಕೆ ಸಿಲುಕಿದೆ. ಎರಡು ಬೋಟ್ಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದು ಇದರಲ್ಲಿ 17 ಮಂದಿ ಇದ್ದರು. ಒಂದು ಬೋಟ್ನಲ್ಲಿ 9 ಮತ್ತು ಇನ್ನೊಂದು ಬೋಟ್ನಲ್ಲಿ 8 ಮಂದಿ ಇದ್ದರು. ಇದರಲ್ಲಿ 8 ಮಂದಿ ಇದ್ದ ಬೋಟ್ನಲ್ಲಿದ್ದವರು ಸಮುದ್ರಕ್ಕೆ ಬಿದ್ದಿದ್ದು ಇಬ್ಬರು ಈಜಿಕೊಂಡು ಉಡುಪಿ ಜಿಲ್ಲೆಯ ಮಟ್ಟುವಿನಲ್ಲಿ ದಡ ಸೇರಿದ್ದಾರೆ. ಓರ್ವನ ಮೃತದೇಹ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ದೊರೆತಿದೆ. ಉಳಿದ 5 ಮಂದಿಯ ಶೋಧ ಕಾರ್ಯಮುಂದುವರಿದಿದೆ.