ಕರ್ನಾಟಕ

karnataka

ETV Bharat / state

ಬೈಕ್ ಸ್ಕಿಡ್ ಆಗಿ ಅಪಘಾತ: ಅಣ್ಣ ಸಾವು, ತಮ್ಮನ ಸ್ಥಿತಿ ಗಂಭೀರ - ಈಟಿವಿ ಭಾರತ್ ಕನ್ನಡ

ಬೈಕ್ ಅಪಘಾತಕ್ಕೀಡಾಗಿ ಅಣ್ಣ ಮೃತಪಟ್ಟಿದ್ದು, ತಮ್ಮ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೈಕ್ ಸ್ಕಿಡ್ ಆಗಿ ಅಪಘಾತ
ಬೈಕ್ ಸ್ಕಿಡ್ ಆಗಿ ಅಪಘಾತ

By

Published : Sep 19, 2022, 7:27 PM IST

ಉಳ್ಳಾಲ (ದಕ್ಷಿಣ ಕನ್ನಡ): ಸಹೋದರರು ಸಂಚರಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿ ಓರ್ವ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪು ಮಹಾಂಕಾಳಿಪಡ್ಪು ಕ್ರಾಸ್ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಪ್ರತಾಪ್ ಶೆಟ್ಟಿ (32) ಮೃತರು. ಸಹೋದರ ಅಭಿಲಾಷ್ ಶೆಟ್ಟಿ‌ (22) ಗಂಭೀರವಾಗಿ ಗಾಯಗೊಂಡವರು. ಬಾರ್​ನಲ್ಲಿ ಮ್ಯಾನೇಜರ್ ಆಗಿ ಪ್ರತಾಪ್ ಶೆಟ್ಟಿ ಕೆಲಸ ಮಾಡುತ್ತಿದ್ದರು. ಅದೇ ಬಾರ್​ನಲ್ಲಿ ಅವರ ಚಿಕ್ಕಮ್ಮನ ಮಗ ಅಭಿಲಾಷ್ ಶೆಟ್ಟಿ‌ (22) ಕೌಂಟರ್ ಬಾಯ್ ಆಗಿದ್ದರು. ಇಬ್ಬರು ಕೆಲಸ ಮುಗಿಸಿ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಬೈಕ್ ಸ್ಕಿಡ್ ಆಗಿ ಅಪಘಾತ

ಜೆಪ್ಪು ಮಹಾಕಾಳಿಪಡ್ಪು ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

(ಇದನ್ನೂ ಓದಿ: ಶಬ್ದಕ್ಕೆ ಹೆದರಿ ಬೈಕ್​ ಸವಾರನಿಗೆ ಗುದ್ದಿದ ಎಮ್ಮೆ.. ಶಬ್ದ ಮಾಲಿನ್ಯದ ಜಾಗೃತಿ ಮೂಡಿಸಿದ IPS​ ಸಜ್ಜನರ್​)

ABOUT THE AUTHOR

...view details