ಮಂಗಳೂರು :ಇಲ್ಲಿನ ಉಳ್ಳಾಲದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಮುಳುಗಿದ ಸಿರಿಯಾ ದೇಶದ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಆರಂಭವಾಗಿದೆ. 8000 ಟನ್ ಉಕ್ಕಿನ ಕಾಯಿಲ್ಗಳನ್ನು ತುಂಬಿಸಿಕೊಂಡು ಚೀನಾದ ಟಿಯಾಂಜಿನ್ನಿಂದ ಎಂ ವಿ ಪ್ರಿನ್ಸಸ್ ಮಿರಾಲ್ ಹಡಗು ಲೆಬನಾನ್ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನ ಬಟ್ಟಪ್ಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಗೊಂಡಿತ್ತು.
ಪ್ರಿನ್ಸೆಸ್ ಮಿರಾಲ್ ಸರಕು ಸಾಗಾಟದ ಹಡಗಿನಲ್ಲಿ 150 ಮೆಟ್ರಿಕ್ ಟನ್ ತೈಲ ಇದ್ದು, ತೈಲ ಸೋರಿಕೆಯಾಗುವುದನ್ನು ತಡೆಯಲು ಪ್ರಯತ್ನ ಮಾಡಲಾಗಿತ್ತು. ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ಗುಜರಾತ್ನ ಪೋರ ಬಂದರಿನಿಂದ 'ಸಮುದ್ರ ಪಾವಕ್' ಎಂಬ ವಿಶೇಷ ತಂತ್ರಜ್ಞ ಹಡಗು ಕೂಡ ಆಗಮಿಸಿತ್ತು. ಕೋಸ್ಟ್ ಗಾರ್ಡ್ ನೌಕೆ, 9 ಹಡಗುಗಳು, 3 ಕೋಸ್ಟ್ ಗಾರ್ಡ್ ಕಾಪ್ಟರ್ಗಳು ನಿಗಾ ಇರಿಸಿದ್ದವು.