ಕರ್ನಾಟಕ

karnataka

ETV Bharat / state

ಪಿಜಿ-ಹೋಮ್ ಸ್ಟೇ ಗಳಿಗೆ ಶೀಘ್ರ ಹೊಸ‌ ಕಾನೂನು ರಚನೆ: ಯು.ಟಿ ಖಾದರ್ - ಯು ಟಿ ಖಾದರ್

ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸ ಮಾಡುವ ಹಲವಾರು ಮಂದಿ ಸಂಕಷ್ಟ ಅನುಭವಿಸುತ್ತಾರೆ. ಪಿಜಿಯಲ್ಲಿ ಇರಬೇಕಾದ ಮೂಲಸೌಕರ್ಯಗಳು ಇರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಿಜಿ ಮತ್ತು ಹೋಮ್ ಸ್ಟೇಗಳಿಗೆ ಶೀಘ್ರದಲ್ಲಿಯೇ ಹೊಸ ಕಾನೂನು ರಚನೆ ‌ಮಾಡಲಾಗುವುದು ಎಂದರು.

ನಗರಾಭಿವೃದ್ಧಿ ಸಚಿವ ಯು ಟಿ ಖಾದರ್

By

Published : Jun 5, 2019, 5:47 PM IST

ಮಂಗಳೂರು:ರಾಜ್ಯದಲ್ಲಿ ಇನ್ಮುಂದೆ ಪಿಜಿ ಹಾಗೂ ಹೋಮ್ ಸ್ಟೇ ಗಳಿಗೆ ಹೊಸ‌ ಕಾನೂನು ರಚಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರಗಳಲ್ಲಿ ಅಸಂಖ್ಯಾತ ಪೇಯಿಂಗ್‌ ಗೆಸ್ಟ್‌ಗಳಿವೆ. ನಗರಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಹೋಮ್ ಸ್ಟೇಗಳಿದೆ. ಹೋಮ್ ಸ್ಟೇ ಪ್ರವಾಸೋದ್ಯಮ ಇಲಾಖೆಯಡಿ ಬರುತ್ತದೆಯಾದರೂ ಪಿಜಿಗಳು ಯಾವುದೇ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತಿಲ್ಲ ಎಂದರು.

ನಗರಾಭಿವೃದ್ಧಿ ಸಚಿವ ಯು ಟಿ ಖಾದರ್

ಪಿಜಿಗಳಲ್ಲಿ ವಾಸ ಮಾಡುವ ಹಲವಾರು ಮಂದಿ ಸಂಕಷ್ಟಕ್ಕೊಳಪಡುತ್ತಾರೆ. ಪಿಜಿಯಲ್ಲಿ ಇರಬೇಕಾದ ಮೂಲಸೌಕರ್ಯಗಳು ಇರುವುದಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಿಜಿ ಮತ್ತು ಹೋಮ್ ಸ್ಟೇಗಳಿಗೆ ನೂತನ ಕಾನೂನು ರಚನೆಯನ್ನು ಶೀಘ್ರದಲ್ಲಿಯೇ ‌ಮಾಡಲಾಗುವುದು ಎಂದರು.

ಗುಡ್ ಪ್ರೈಡೆ, ಈದ್ ಹಾಗೂ ಮಹಾಲಯ ಅಮಾವಾಸ್ಯೆ ದಿನ ಸರ್ಕಾರಿ ರಜೆ ರದ್ದು ಬಗ್ಗೆ ಜನರು ಗೊಂದಲ ಪಡುವುದು ಬೇಡ. ಸರಕಾರ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ. ಆ ವಿಚಾರ ಈಗ ಡ್ರಾಫ್ಟ್​​ನಲ್ಲಿ ಇದೆ. ಸರಕಾರ ಜನಾಭಿಪ್ರಾಯ ಪಡೆದು ಮುಂದುವರಿಯಲಿದೆ ಎಂದರು.

ABOUT THE AUTHOR

...view details