ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಆಗಿದ್ದರೂ ದಿನಸಿ ಸಾಮಾಗ್ರಿಗಳಿಗೆ ಜನರು ಹೊರ ಬರುತ್ತಿರುವುದರಿಂದ ನಾಳೆಯಿಂದ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಾಳೆಯಿಂದ ಸಂಪೂರ್ಣ ಬಂದ್, ದಿನಸಿ ಸಾಮಾಗ್ರಿ ಮನೆಮನೆಗೆ ಪೂರೈಕೆ - ದಿನಸಿ ಸಾಮಾಗ್ರಿ ಮನೆಮನೆ ಪೂರೈಕೆ
ಇಂದು ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗಿತ್ತು. ನಾಳೆಯಿಂದ ಅದೂ ಇರುವುದಿಲ್ಲ. ಜನರಿಗೆ ಬೇಕಾದ ದಿನಸಿ ಮೊದಲಾದ ಸವಲತ್ತುಗಳನ್ನು ನಾವೇ ಮನೆಮನೆಗೆ ತಲುಪಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇಂದು ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗಿತ್ತು. ನಾಳೆಯಿಂದ ಅದೂ ಇರುವುದಿಲ್ಲ. ಜನರಿಗೆ ಬೇಕಾದ ದಿನಸಿ ಮೊದಲಾದ ಸವಲತ್ತುಗಳನ್ನು ನಾವೇ ಮನೆಮನೆಗೆ ತಲುಪಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಮಾತುಕತೆ ಮಾಡಲಾಗುತ್ತಿದೆ. ಸರ್ಕಾರದ ಕಡೆಯಿಂದ ಹೇಗೆ ತಲುಪಿಸುವುದು, ಅಪಾರ್ಟ್ಮೆಂಟ್‌ಗಳಿಗೆ ಹೇಗೆ ತಲುಪಿಸಬಹುದು ಎಂದು ಮಾತುಕತೆ ನಡೆಯುತ್ತಿದೆ ಎಂದರು.
ಕೇರಳದಿಂದ ಮಂಗಳೂರಿಗೆ ನಿನ್ನೆ ಅತಿ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ತಲಪಾಡಿ ಗಡಿಯಲ್ಲಿ ಇಂದು ಆ್ಯಂಬುಲೆನ್ಸ್ ಕೂಡ ವಾಪಸ್ ಕಳುಹಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮಗೆ ಸಾಕಾಗಲ್ಲ. ಹೀಗಾಗಿ ಹೊರಗಿನವರನ್ನು ನಿರ್ಬಂಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.