ಉಳ್ಳಾಲ: ಫ್ರೀ ಫಯರ್ ಮೊಬೈಲ್ ಗೇಮ್‍ಗಾಗಿ ಆಕೀಫ್ (12) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ರಕ್ಷಣೆ ನೀಡಿದ್ದ ಆತನ ತಂದೆಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಸಂತೋಷ್ (45) ಬಂಧಿತ. ಆಕೀಫ್ನನ್ನು ಹತ್ಯೆ ಮಾಡಿದ್ದ 17 ವರ್ಷದ ಮಗನು ತನ್ನ ತಂದೆ ಸಂತೋಷ್ ಬಳಿ ಈ ವಿಚಾರ ತಿಳಿಸಿದ್ದ. ವಿಷಯ ಗೊತ್ತಿದ್ದರು ಸಹ ಮಗನಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಪೊಲೀಸರು ಸಂತೋಷ್‍ನನ್ನು ಬಂಧಿಸಿದ್ದಾರೆ. ಬಂಧಿತ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲಿ ಲಾರಿ ಚಾಲಕನಾಗಿದ್ದ.