ಕರ್ನಾಟಕ

karnataka

ETV Bharat / state

ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಟ್ಯಾಟೂ ನೋಡಿ ನೀತಿ ಪಾಠ ಮಾಡಿದ ಕಮಿಷನರ್​

ಸ್ಯಾಂಡಲ್​​​​​ವುಡ್ ಡ್ರಗ್ ಪ್ರಕರಣದಲ್ಲಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧಿತನಾಗಿದ್ದ. ಇಂದು ನಡೆದ ಪರೇಡ್​​ ನಲ್ಲಿ ಕಮಿಷನರ್ ಅವರಿಗೆ​ ನೀತಿ ಪಾಠ ಮಾಡಿದ್ದಾರೆ.

ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಯ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್​
ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಯ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್​

By

Published : Jul 6, 2022, 3:33 PM IST

Updated : Jul 6, 2022, 6:46 PM IST

ಮಂಗಳೂರು: ದೇಶದ ಗಮನ ಸೆಳೆದಿದ್ದ ಸ್ಯಾಂಡಲ್ ವುಡ್ ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಶೆಟ್ಟಿಯ ಅಂಗಿ ಬಿಚ್ಚಿ ಅವನು ಹಾಕಿಸಿಕೊಂಡಿದ್ದ ಟ್ಯಾಟೂ ನೋಡಿ ಮಂಗಳೂರು ಪೊಲೀಸ್ ಕಮಿಷನರ್ ಬುದ್ದಿವಾದ ಹೇಳಿದ್ದಾರೆ.

ಸ್ಯಾಂಡಲ್ಲ್​​ವುಡ್ ಡ್ರಗ್ ಪ್ರಕರಣದಲ್ಲಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧಿತನಾಗಿದ್ದ. ಇಂದು ಮಂಗಳೂರಿನಲ್ಲಿ ನಡೆದ ಎಂಒಬಿ ( ಕಳವು, ಡಕಾಯಿತಿ, ಜಾನುವಾರು ಕಳವು, ಮಾದಕವ್ಯಸನಿಗಳ ಮೇಲೆ ಎಂಒಬಿ ಕಾರ್ಡ್ ತೆರೆಯಲಾಗುತ್ತದೆ) ಪರೇಡ್​​​​ನಲ್ಲಿ ಇದ್ದ ಅವನನ್ನು ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಅವರು ಪ್ರಶ್ನಿಸಿದ್ದಾರೆ.

ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ, ಟ್ಯಾಟೂ ನೋಡಿ ನೀತಿ ಪಾಠ ಮಾಡಿದ ಕಮಿಷನರ್​

ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಶರ್ಟ್ ಬಿಚ್ಚಿಸಿ ಆತನ ಕತ್ತಿನಲ್ಲಿದ್ದ ಹಾರ ಮತ್ತು ಎದೆಯ ಮೇಲಿದ್ದ ಟ್ಯಾಟೂ ನೊಡಿ 'ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಿಶೋರ್ ಶೆಟ್ಟಿ, ತಾಯಿಯ ಟ್ಯಾಟೂ ಹಾಕಿರುವೆ ಎಂದಾಗ 'ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ‌. ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ. ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದಿ. ಹೇಗೆ ತೆಗೆದುಕೊಳ್ಳುತ್ತಿದ್ದೆ' ಎಂದು ಪ್ರಶ್ನಿಸಿದ್ದಾರೆ.

ಕಮಿಷನರ್​ ಪ್ರಶ್ನೆಗೆ ಶೆಟ್ಟಿ ಉತ್ತರಿಸಿದ್ದು ಹೀಗೆ?ಕಿಶೋರ್ ಶೆಟ್ಟಿ ಉದ್ದ ಕೂದಲು ಬಿಟ್ಟಿದ್ದನ್ನು ಪ್ರಶ್ನಿಸಿದ ಕಮಿಷನರ್​​​ಗೆ, ಡ್ಯಾನ್ಸ್ ಗಾಗಿ ಈ ರೀತಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಇದೀಗ ಕಿಶೋರ್ ಅಮನ್ ಶೆಟ್ಟಿ ಮಂಗಳೂರಿನ ಖಾಸಗಿ ಟಿವಿ ವಾಹಿನಿಯೊಂದರ ಡ್ಯಾನ್ಸ್ ಸ್ಪರ್ಧೆಯ ಜಡ್ಜ್ ಕೂಡಾ ಆಗಿದ್ದಾನೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಪೊಲೀಸ್ ಕಮಿಷನರ್

ಇನ್ನು ಹಾಜರಿದ್ದ ಆರೋಪಿತರ ಬಳಿ ಇದ್ದ ಐಫೋನ್‌, ಕ್ರೆಡಿಟ್, ಡೆಬಿಟ್ ಕಾರ್ಡ್​​ಗಳು, ಪರ್ಸ್ ತುಂಬಾ ಹಣವನ್ನು ಕಂಡು ಅವುಗಳನ್ನು ಮುಟ್ಟುಗೋಲು ಹಾಕಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಕಳವು, ಡಕಾಯಿತಿ, ಜಾನುವಾರು ಕಳವು, ಮಾದಕ ವ್ಯಸನಿಗಳ ಮೇಲೆ ಎಂಒಬಿ ಕಾರ್ಡ್ ತೆರೆಯಲಾಗಿದ್ದು, ಇಂದು ಎಂಒಬಿ ಕಾರ್ಡ್ ತೆರೆಯಲಾಗಿರುವವರ ಪರೇಡ್ ನಡೆಯಿತು.‌ ವಿಚಾರಣೆ ಬಳಿಕ ಪೊಲೀಸರು ಎಲ್ಲ ಕ್ರಿಮಿನಲ್​​​ಗಳನ್ನೂ ಮೈದಾನದಲ್ಲಿ ಮೂರು ಸುತ್ತು ಪರೇಡ್ ಮಾಡಿಸಿದರು.

ಇದನ್ನೂ ಓದಿ: ಗುರೂಜಿ ಒಳ್ಳೆಯವರಿದ್ದರು, ನನ್ನ ಗಂಡ ಕೊಲೆ ಮಾಡಿದ್ದೇಕೊ? ವನಜಾಕ್ಷಿ ಶಿರೂರ ಮಾತು

Last Updated : Jul 6, 2022, 6:46 PM IST

ABOUT THE AUTHOR

...view details