ಕರ್ನಾಟಕ

karnataka

ETV Bharat / state

ಕರಾವಳಿ ಉತ್ಸವ ಕ್ರೀಡಾಕೂಟಕ್ಕೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಕರಾವಳಿ ಉತ್ಸವ ಕ್ರೀಡಾ ಸಮಿತಿಯ ವತಿಯಿಂದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕರಾವಳಿ ಉತ್ಸವ ಕ್ರೀಡೋತ್ಸವಕ್ಕೆ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.

LA Vedavaysa   Kamath  inauguration  for the Coastal Festival
ಕರಾವಳಿ ಉತ್ಸವ ಕ್ರೀಡಾಕೂಟಕ್ಕೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

By

Published : Jan 11, 2020, 7:54 PM IST

ಮಂಗಳೂರು:ಕರಾವಳಿ ಉತ್ಸವ ಕ್ರೀಡಾ ಸಮಿತಿಯ ವತಿಯಿಂದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕರಾವಳಿ ಉತ್ಸವ ಕ್ರೀಡೋತ್ಸವಕ್ಕೆ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್

ಕ್ರೀಡೋತ್ಸವವನ್ನು‌ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ನಡೆಯುವ ವಾಲಿಬಾಲ್ ಕ್ರೀಡಾಂಗಣಕ್ಕೆ ಮೇಲ್ಛಾವಣಿ ಕಾಮಗಾರಿ ನಡೆಸಲಾಗುವುದು. ಇದರ ಬಗ್ಗೆ ಕ್ರೀಡಾ ಮತ್ತು ಯುವಜನ ಇಲಾಖೆಯೊಂದಿಗೆ ಮಾತುಕತೆ ಅಂತಿಮ ಹಂತದಲ್ಲಿದ್ದು, ಮುಂದಿನ ಕರಾವಳಿ ಉತ್ಸವದ ಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸುವ ಯೋಚನೆ ಇದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳಾ ಕ್ರೀಡಾಂಗಣದ ಅಭಿವೃದ್ಧಿಗೆ 10 ಕೋಟಿ ರೂ.ವನ್ನು ಈಗಾಗಲೇ ಕೊಡಲಾಗಿದೆ. ಅಲ್ಲದೆ ಮಂಗಳಾ ಕ್ರೀಡಾಂಗಣದ ಅಭಿವೃದ್ಧಿಗೆ 3.85 ಕೋಟಿ ರೂ. ಹಣವನ್ನು ಯುವ ಸಬಲೀಕರಣ ಇಲಾಖೆಯ ಮುಖಾಂತರ ಅನುಮೋದನೆ ಮಾಡಿದ್ದು, ಕೊನೆಯ ಹಂತದಲ್ಲಿದೆ. ಆಯುಕ್ತರಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಹೈಜಂಪ್ ಕ್ರೀಡಾಂಗಣಕ್ಕೂ ಮ್ಯಾಟ್ ಹಾಗೂ ಇನ್ನಿತರ ಪರಿಕರಗಳು ಅನುಮೋದನೆಗೊಂಡಿವೆ. ಆದಷ್ಟು ಬೇಗ ಇದರ ಕಾಮಗಾರಿಯನ್ನೂ ನಡೆಸಲಾಗುವುದು. ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದ ಹೊಸದಾಗಿ 15.50 ಲಕ್ಷ ರೂ. ನಲ್ಲಿ ರೂಫ್ ಹಾಕುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದರು.

ಮಂಗಳಾ ಈಜುಕೊಳ ಇದೆ. ಜೊತೆಗೆ 25-15 ಇನ್ನೊಂದು ಈಜುಕೊಳ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಕಬಡ್ಡಿ, ಶೆಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಕ್ರೀಡಾ ಕೂಟ ನಡೆಸುವಂತಹ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣವನ್ನು ನಗರದ ಉರ್ವದ ಬಳಿ ಗುರುತಿಸಲಾಗಿದೆ. ಅದು ಈಗಾಗಲೇ ಅನುಮೋದನೆಗೊಂಡು ಟೆಂಡರ್ ಹಂತದಲ್ಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಸುನೀಲ್ ಬಾಳಿಗಾ ಅವರನ್ನು ಸನ್ಮಾನಿಸಲಾಯಿತು. ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ.ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಮಹಮ್ಮದ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details