ಕರ್ನಾಟಕ

karnataka

ETV Bharat / state

ಗಣೇಶಪುರ : 74 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

ಶಾಸಕ ಡಾ.ಭರತ್ ಶೆಟ್ಟಿ ಅವರು ಗಣೇಶಪುರದ ಸರ್ಕಾರಿ ಜಾಗದಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಂತ ಹಕ್ಕು ಪತ್ರ ವಿತರಣೆ ಮಾಡಿದರು.

ಹಕ್ಕು ಪತ್ರ ವಿತರಣೆ
ಹಕ್ಕು ಪತ್ರ ವಿತರಣೆ

By

Published : Aug 17, 2020, 4:16 PM IST

ಸೂರತ್ಕಲ್: ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವುದು ಕನಸಾಗಿರುತ್ತದೆ. ನಗರ ಪ್ರದೇಶದಲ್ಲಿರುವ ಹಲವರಿಗೆ ಇದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಂತ ಹಕ್ಕು ನೀಡುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತ್ವರಿತಗೊಳಿಸಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಗಣೇಶಪುರದ 3ನೇ ವಾರ್ಡ್ ,4 ಮತ್ತು 5ನೇ ವಾರ್ಡ್ ನಲ್ಲಿ ಅರ್ಹ 74 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಸ್ವಂತ ಮನೆಯ ಹಕ್ಕು ನೀಡುವಾಗ ಸಂತಸವಾಗುತ್ತದೆ. ಒಂದು ಕುಟುಂಬಕ್ಕೆ ನೆಮ್ಮದಿಯಾಗಿರಲು ಸೂರು ಒದಗಿಸಿದ ಧನ್ಯತಾ ಭಾವ ಮೂಡುತ್ತದೆ. ಸರ್ಕಾರದ ಕೆಲಸವನ್ನು ಅಧಿಕಾರಿಗಳು ನಿಷ್ಠೆಯಿಂದ ಮಾಡುತ್ತಿದ್ದಾರೆ. ತಾನು ಶಾಸಕನಾದ ಮೇಲೆ ಇದುವರೆಗೆ ನಾಲ್ಕುವರೆ ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ್ದೇನೆ ಎಂದರು.

ಕ್ಷೇತ್ರದಲ್ಲಿ ಸಾರ್ವಜನಿಕರ ಪರವಾಗಿ ನಾನು, ಪಾಲಿಕೆ ಸದಸ್ಯರು ಸರ್ಕಾರದ ಸೌಲಭ್ಯವನ್ನು ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಮುಂದೆಯೂ ನಿರಂತರವಾಗಿ ಈ ಕೆಲಸ ಮುಂದುವರಿಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮನಪಾ ಸದಸ್ಯರುಗಳಾದ ಲೋಕೇಶ್ ಬೊಳ್ಳಾಜೆ, ಲಕ್ಷ್ಮೀಶೇಖರ್ ದೇವಾಡಿಗ, ಶ್ವೇತ ಪೂಜಾರಿ,ಶೋಭಾ ರಾಜೇಶ್, ಸರಿತ ಶಶಿಧರ್, ತಹಶೀಲ್ದಾರ್ ಗುರುಪ್ರಸಾದ್, ಕಂದಾಯ ಅಧಿಕಾರಿ ನವೀನ್ ಮತ್ತಿತ್ತರು ಉಪಸ್ಥಿತರಿದ್ದರು.

ABOUT THE AUTHOR

...view details