ಕರ್ನಾಟಕ

karnataka

ETV Bharat / state

ವಿದ್ಯಾರ್ಥಿನಿಯ 'ಗುರು ಕಾಣಿಕೆ' ಮೆಚ್ಚಿ ಅಭಿನಂದನಾ ಪತ್ರ ಬರೆದ್ರು ಸಚಿವ ಎಸ್​​​. ಸುರೇಶ್​ಕುಮಾರ್

ವಿದ್ಯಾರ್ಥಿನಿಯೊಬ್ಬಳು ಬರೆದ 'ಗುರು ಕಾಣಿಕೆ' ಎಂಬ ಕವನ ಪುಸ್ತಕವನ್ನು ಮೆಚ್ಚಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಅವರು ಅಭಿನಂದನಾ ಪತ್ರ ಬರೆದಿದ್ದಾರೆ.

minister suresh kumar wrote a appreciate letter
ಸಚಿವ ಎಸ್​​​. ಸುರೇಶ್ ಕುಮಾರ್

By

Published : May 23, 2020, 12:37 PM IST

ಬೆಳ್ತಂಗಡಿ:ಬೆಳಾಲು ಗ್ರಾಮದ ಮಾಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರೇಷ್ಮಾ ಬರೆದ 'ಗುರು ಕಾಣಿಕೆ' ಎಂಬ ಕವನ ಪುಸ್ತಕವನ್ನು ಮೆಚ್ಚಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಅವರು ಅಭಿನಂದನಾ ಪತ್ರ ಬರೆದಿದ್ದಾರೆ.

ಶಾಲೆಯಲ್ಲಿರುವಾಗಲೇ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು, ಕವನಗಳ ರೂಪದಲ್ಲಿ ವ್ಯಕ್ತಪಡಿಸಿ ಕಾವ್ಯಲೋಕಕ್ಕೆ ತನ್ನ ಕಾಣಿಕೆ ಅರ್ಪಿಸುತ್ತಿರುವುದು ಖುಷಿಯ ಸಂಗತಿಯಾಗಿದೆ. ನಾಡು, ನುಡಿ, ರಾಷ್ಟ್ರ, ಗುರುಗಳು, ತಂದೆ-ತಾಯಿ ಹಾಗೂ ಪ್ರಕೃತಿ ಪ್ರೇಮದ ಕುರಿತ ಸಾಲುಗಳು ಮೆಚ್ಚುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿವರು ಬರೆದಿರುವ ಅಭಿನಂದನಾ ಪತ್ರ

ನಿನ್ನ ಮೊದಲ ಕೃತಿಯನ್ನು ಪೋಷಕರು ಮತ್ತು ಗುರುಗಳಿಗೆ ಸಮರ್ಪಿಸುವ ಮೂಲಕ ಕೃತಜ್ಞತಾ ಮನೋಭಾವ ವ್ಯಕ್ತವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿ ನೀನು ಎಲ್ಲರಿಗೂ ಮಾದರಿಯಾಗಿದ್ದಿಯಾ ಎಂದು ಹೇಳಲು ಹೆಮ್ಮೆ ಹಾಗೂ ಹರ್ಷ ಎನಿಸುತ್ತದೆ ಎಂದು ಬರೆದಿದ್ದಾರೆ.

ಕವನ ಸಂಕಲನದಲ್ಲಿ ನಿನ್ನ ತಾಯಿಯು ವ್ಯಕ್ತಪಡಿಸಿರುವ ತಾಯ್ನುಡಿಗಳು, ತಮ್ಮ ಕುಡಿಗಳ ಕುರಿತು ಎಲ್ಲಾ ತಾಯಂದಿರ ಮನಸ್ಸುಗಳ ಬಗ್ಗೆ ತೋರಿಸುತ್ತಿದೆ. ನಿನ್ನ ಲೇಖನಿಗೆ ಹೀಗೆಯೇ ಸಾಥ್ ನೀಡುವ ಮೂಲಕ ನಿನ್ನ ಕಾವ್ಯ ಕೃಷಿ ಮುಂದುವರಿದು, ಕನ್ನಡಕ್ಕೆ ಉತ್ತಮ ಕೃತಿಗಳು ಸಮರ್ಪಿತವಾಗಲಿ ಎಂದು ಸಚಿವರು ಹಾರೈಸಿದ್ದಾರೆ.

ನಿನ್ನನ್ನು ಪ್ರೋತ್ಸಾಹಿಸುವ ಮೂಲಕ ನಿನ್ನೊಂದಿಗೆ ಬೆನ್ನೆಲುಬಾಗಿ ನಿಂತ ನಿನ್ನ ತಂದೆ ತಾಯಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪುಸ್ತಕ ಮುದ್ರಣಕ್ಕೆ ಕಾರಣರಾದ ಶಿಕ್ಷಕ ರಾಜೇಶ್ ಸವಣಾಲು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು ಎಂದು ತಾವು ಬರೆದ ಅಭಿನಂದನಾ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಶುಭ ಹಾರೈಸಿದ್ದಾರೆ.

ABOUT THE AUTHOR

...view details