ಕರ್ನಾಟಕ

karnataka

ETV Bharat / state

ಎಮ್.ಡಿ.ಎಮ್ ನಿಷೇಧಿತ ಮಾದಕ ದ್ರವ್ಯ ಮಾರಾಟ: ಇಬ್ಬರು ಆರೋಪಿಗಳ ಬಂಧನ - drug sales news of mangalore

ಎಮ್.ಡಿ.ಎಮ್ ನಿಷೇಧಿತ ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಟ್ಟ ಹಾಕುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಮ್.ಡಿ.ಎಮ್ ನಿಷೇಧಿತ ಮಾದಕ ದ್ರವ್ಯ ಮಾರಾಟ: ಇಬ್ಬರು ಆರೋಪಿಗಳ ಬಂಧನ

By

Published : Sep 20, 2019, 10:46 PM IST

ಮಂಗಳೂರು:ಎಮ್.ಡಿ.ಎಮ್ ನಿಷೇಧಿತ ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಟ್ಟ ಹಾಕುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರತ್ಕಲ್‌ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ‌ ಮೊಹಮ್ಮದ್ ಮುಜಾಮಿಲ್ (40), ಚೊಕ್ಕಬೆಟ್ಟುವಿನ ಪರಮೇಶ್ವರಿ ನಗರ ನಿವಾಸಿ ಮೊಹಮ್ಮದ್ ಶರೀಫ್ ಸಿದ್ದಿಕ್(40) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಪೊಲೀಸ್ ನಿರೀಕ್ಷಕ ಮತ್ತು ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆರೋಪಿಗಳ ಕಾರು ಪರಿಶೀಲಿಸಿದಾಗ ಮಾನವ ಜೀವಕ್ಕೆ ಅಪಾಯ ತಂದೊಡ್ಡುವ ಎಮ್.ಡಿ.ಎಮ್ ಎಂಬ ನಿಷೇಧಿತ ಮಾದಕ ದ್ರವ್ಯ ಇರುವುದು ಖಾತರಿಯಾಗಿದೆ.

ಆರೋಪಿಗಳಿಂದ 4 ಲಕ್ಷ ರೂ ಮೌಲ್ಯದ ಕಾರು, ಅಂದಾಜು‌ ಮೌಲ್ಯ 30 ಸಾವಿರ ರೂ.ನ 11 ಗ್ರಾಂ ಎಂಡಿಎಂ ಮಾದಕ ದ್ರವ್ಯ, 10,950 ರೂ. ನಗದು, 21ಸಾವಿರ ರೂ. ಮೌಲ್ಯದ ನಾಲ್ಕು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ‌. ಒಟ್ಟು 4,61,950 ರೂ. ಮೌಲ್ಯದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details