ಕರ್ನಾಟಕ

karnataka

'ಕಷ್ಟ ಬಂದಾಗ ಮಹಾನ್ ವ್ಯಕ್ತಿಗಳ ಜೀವನ ಶೈಲಿ ಅನುಕರಣೆ ಪ್ರಯೋಜನಕಾರಿ'

By

Published : Apr 5, 2021, 1:30 PM IST

ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಈಗಿನ ಯುವಜನತೆಗೆ ತಿಳಿಸಿ ಹೇಳುವುದೇ ದೊಡ್ಡ ಸವಾಲಾಗಿದೆ. ಕಷ್ಟಗಳು ಬಂದಾಗ ಮಹಾನ್ ವ್ಯಕ್ತಿಗಳ ಜೀವನ ಶೈಲಿ ಅನುಕರಣೆ ಮಾಡಿದರೆ ಬಹಳಷ್ಟು ಪ್ರಯೋಜನವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

mangaluru
ಡಾ.ಬಾಬು ಜಗಜೀವನ್ ರಾಂ ಅವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಮಂಗಳೂರು: ಯುವಜನರು ತಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಮಹಾನ್ ವ್ಯಕ್ತಿಗಳ ಜೀವನ ಶೈಲಿ ಅನುಕರಣೆ ಮಾಡಿದರೆ ಬಹಳಷ್ಟು ಪ್ರಯೋಜನವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಡಾ.ಬಾಬು ಜಗಜೀವನ್ ರಾಂ ಅವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಈಗಿನ ಯುವಜನತೆಗೆ ತಿಳಿಸಿ ಹೇಳುವುದೇ ದೊಡ್ಡ ಸವಾಲಾಗಿದೆ. ಮಹಾನ್ ವ್ಯಕ್ತಿಗಳ ಸಾಧನೆಗಳೇನು, ಅವರು ಯಾವ ರೀತಿ ಕಷ್ಟಪಟ್ಟರು, ಆಗಿನ ಪರಿಸ್ಥಿತಿ ಏನಿತ್ತು ಎಂಬುದನ್ನು ಯುವಜನತೆಗೆ ತಿಳಿಹೇಳಲು ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಲಾಗುತ್ತದೆ. ಯಾವುದೇ ಸಮಸ್ಯೆ ಬಂದಾಗ ಎದುರಿಸಿ ನಿಲ್ಲಬೇಕು, ಆತ್ಮಸ್ಥೈರ್ಯ ಹೇಗೆ ಹೆಚ್ಚಿಸಬೇಕು ಎಂಬುದಕ್ಕೆ ಬಾಬು ಜಗಜೀವನರಾಂ ಬದುಕು ಮಾದರಿ ಎಂದರು.

ಕಾರ್ಯಕ್ರಮಮದಲ್ಲಿ ಮಂಗಳೂರಿನ ಕೊಡಿಯಾಲ್ ಬೈಲ್​ನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ನಡೆಸಲಾಯಿತು.

ABOUT THE AUTHOR

...view details