ಕರ್ನಾಟಕ

karnataka

ETV Bharat / state

ಮಂಗಳೂರು ಹಿಂಸಾಚಾರ: ಈವರೆಗೆ 12 ಆರೋಪಿಗಳ ಬಂಧನ

ಡಿಸೆಂಬರ್ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವೇಳೆ, ಗಲಬೆ ನಡೆಸಿದ ಆರೋಪದಲ್ಲಿ ಈವರೆಗೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Mangalore protest case: 12 are arrested!
ಮಂಗಳೂರು ಹಿಂಸಾಚಾರ: ಈವರೆಗೆ 12 ಆರೋಪಿಗಳ ಬಂಧನ

By

Published : Dec 28, 2019, 9:19 PM IST

ಮಂಗಳೂರು:ಡಿಸೆಂಬರ್ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಗಲಬೆ ನಡೆಸಿದ ಆರೋಪದಲ್ಲಿ ಈವರೆಗೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜನಾಡಿ ನಿವಾಸಿ ಮುಹಮ್ಮದ್ ಅಜರ್ (22), ತೊಕ್ಕೊಟ್ಟು ನಿವಾಸಿ ತಂಜಿಲ್ (20), ಬಿ.ಸಿ.ರೋಡ್ ಕಲ್ಲಮಜಲು ನಿವಾಸಿ ಆರ್ಯನ್ (30), ಬಂಟ್ವಾಳ ಸಮೀಪದ ಮಾರಿಪಳ್ಳ ನಿವಾಸಿ ನಾಜಿಮ್ (24), ಉಡುಪಿ ಶಿರ್ವ ನಿವಾಸಿ ಆಸಿಕ್ (21), ಬಜ್ಪೆ ನಿವಾಸಿ ಅನ್ವರ್ ಹುಸೈನ್ (23), ಅಡ್ಯಾರ್ ಕಣ್ಣೂರು ನಿವಾಸಿ ಮುಹಮ್ಮದ್ ಇಕ್ಬಾಲ್ (27), ಪಂಜಿಮೊಗರು ನಿವಾಸಿ ಅಬ್ದುಲ್ ಹಫೀಝ್ (20), ಕಾವೂರು ನಿವಾಸಿಗಳಾದ ಮುಹಮ್ಮದ್ ಫಯಾಝ್ (27), ಖಲಂದರ್ ಬಾಷಾ (30), ಕುಂಜತ್‌ಬೈಲ್ ದೇವಿನಗರದ ನಾಸಿರುದ್ದೀನ್ (32), ಅಡ್ಯಾರ್ ಕಣ್ಣೂರು ನಿವಾಸಿ ಮುಹಮ್ಮದ್ ಫಾರೂಕ್ (32) ಬಂಧಿತರು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 24 ಪ್ರಕರಣಗಳನ್ನ ದಾಖಲಿಸಲಾಗಿದೆ. ವಿಡಿಯೋ ತುಣುಕುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋಟೊಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಿ‌ ಬಂಧಿಸಲಾಗುತ್ತಿದೆ. ಮೊದಲು ಎಂಟು ಮಂದಿಯನ್ನು ಬಂಧಿಸಲಾಗಿದ್ದರೆ ಈಗ ನಾಲ್ವರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೇರಿದೆ.

ABOUT THE AUTHOR

...view details