ಕರ್ನಾಟಕ

karnataka

ETV Bharat / state

ಜನನಿಬಿಡ ರಸ್ತೆಗಳಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್.. ಓರ್ವ ಅಪ್ರಾಪ್ತ ಸೇರಿ 8 ಮಂದಿ ಅಂದರ್​ - ಮಂಗಳೂರಲ್ಲಿ ಬೈಕ್ ವ್ಹೀಲಿಂಗ್

ಜನನಿಬಿಡ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಪತ್ತೆ ಹಚ್ಚಿ ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Mangalore police arrested eight youths for bike wheeling
ಮಂಗಳೂರಲ್ಲಿ ಬೈಕ್ ವ್ಹೀಲಿಂಗ್ ಮಾಡ್ತಿದ್ದ ಎಂಟು ಯುವಕರ ಬಂಧನ

By

Published : Mar 12, 2022, 2:41 PM IST

Updated : Mar 12, 2022, 3:44 PM IST

ಮಂಗಳೂರು :ರಸ್ತೆಗಳಲ್ಲಿ ಅಪಾಯಕಾರಿ ರೈಡ್ ಮತ್ತು ವ್ಹೀಲಿಂಗ್ ಮಾಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದ್ದಾನೆ.

ನಗರದ ಕಿಶನ್ ಕುಮಾರ್, ತೌಸಿಫ್ ಮೊಹಮ್ಮದ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಅನಿಝ್, ಮೊಹಮ್ಮದ್ ಸ್ವಾಹಲಿ, ಅಬೂಬಕ್ಕರ್ ಸಿದ್ದೀಕ್, ಇಲಿಯಾಸ್ ಮತ್ತು ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

ಬಂಧಿತ ಯುವಕರು

ಇತ್ತೀಚೆಗೆ ಯುವಕರು ಹೆದ್ದಾರಿಯಲ್ಲಿ ಅಪಾಯಕಾರಿ ಬೈಕ್ ರೈಡ್ ಮತ್ತು ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇತ್ತ ಸೋಶಿಯಲ್​ ಮೀಡಿಯಾದ ಮೇಲೆ ನಿಗಾ ಇಟ್ಟ ಪೊಲೀಸ್​ ಇಲಾಖೆ, ಯುವಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿದೆ.

ಮಂಗಳೂರಲ್ಲಿ ಬೈಕ್ ವ್ಹೀಲಿಂಗ್ ಮಾಡ್ತಿದ್ದ ಎಂಟು ಯುವಕರ ಬಂಧನ

ವ್ಹೀಲಿಂಗ್ ಮಾಡಿದ 5 ಬೈಕ್​​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನಗಳ ನೋಂದಣಿ ಮತ್ತು ಬಂಧಿತರ ಡ್ರೈವಿಂಗ್ ಲೈಸೆನ್ಸ್ ರದ್ದತಿಗೆ ಆರ್​​ಟಿಒಗೆ ಪೊಲೀಸರು ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದಿರುವ ಬೈಕ್​ಗಳು

ಇದನ್ನೂ ಓದಿ: ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ

Last Updated : Mar 12, 2022, 3:44 PM IST

ABOUT THE AUTHOR

...view details