ಮಂಗಳೂರು:ಕೊರೊನಾ ಸೋಂಕು ಹರಡುವ ಪ್ರಮಾಣವನ್ನು ತಡೆಗಟ್ಟಲು ದ. ಕ. ಜಿಲ್ಲೆಯಲ್ಲಿ ನಾಳೆಯಿಂದ ಮತ್ತೆ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ನಾಳೆಯಿಂದ ಮಂಗಳೂರು ಲಾಕ್‌ಡೌನ್: ಮಾರುಕಟ್ಟೆಯಲ್ಲಿ ಜನಜಂಗುಳಿ - Mangalore Market
ಕೊರೊನಾ ಸೋಂಕು ಹರಡುವ ಪ್ರಮಾಣವನ್ನು ತಡೆಗಟ್ಟಲು ದ.ಕ.ಜಿಲ್ಲೆಯಲ್ಲಿ ನಾಳೆಯಿಂದ ಮತ್ತೆ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂದು ಅಗತ್ಯ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದ್ದು, ಮಳೆಯ ನಡುವೆಯೂ ಜನರು ಕೊಡೆಗಳನ್ನು ಹಿಡಿದು ಖರೀದಿ ನಡೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇನ್ನೊಂದೆಡೆ, ಮಾರುಕಟ್ಟೆ ಪ್ರದೇಶದಲ್ಲಿ ಖರೀದಿಗಾಗಿ ಬಂದವರು ವಾಹನಗಳನ್ನು ನಿಲ್ಲಿಸಿರುವ ಪರಿಣಾಮ ಟ್ರಾಫಿಕ್ ಜಾಮ್ ಕೂಡಾ ಆಗಿದೆ. ನಾಳೆಯಿಂದ ವಾರಗಳ ಕಾಲ ಲಾಕ್‌ಡೌನ್ ಇದ್ದರೂ ಬೆಳಗ್ಗೆ 8 ರಿಂದ 11ರವರೆಗೆ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದೆ. ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿರುವ ಕಾರಣ ಇಂದೇ ಜನರು ಮಾರುಕಟ್ಟೆಗಳಿಗೆ ಬರುತ್ತಿದ್ದಾರೆ.